ಅದಾನಿ ಗ್ರೂಪ್‌ನಿಂದ ಪ್ರಧಾನ ಮಂತ್ರಿ ಕೊರೋನಾ ಫಂಡ್‌ಗೆ 200 ಕೋಟಿ ರೂ.: ಕಿಶೋರ್ ಆಳ್ವ
ಪಡುಬಿದ್ರೆ: ಅದಾನಿ ಗ್ರೂಪ್‌ನಿಂದ ಪ್ರಧಾನ ಮಂತ್ರಿ ಕೊರೋನಾ ಫಂಡ್‌ಗೆ 200 ಕೋಟಿ ನೀಡಲಾಗಿದ್ದು, ಮಾತ್ರವಲ್ಲದೆ ಸ್ಥಳೀಯ ಎಂಟು ಗ್ರಾಮ ಪಂಚಾಯತ್‌ಗೆ ಸಹಿತ ಜಿಲ್ಲೆಯಲ್ಲಿ ಅದಾನಿ ವತಿಯಿಂದ 20 ಟನ್‌ಗೂ ಹೆಚ್ಚು ಆಹಾರ ಸಾಮಾಗ್ರಿ ವಿತರಿಸಿದ್ದಾಗಿ ಅದಾನಿ ಗ್ರೂಪ್ನ ಜಂಟಿ ನಿರ್ದೇಶಕ ಕಿಶೋರ್ ಆಳ್ವ ತಿಳಿಸಿದ್ದಾರೆ.
ಯುಪಿಸಿಎಲ್ ನೀಡಿದ್ದ ಆಹಾರ ಕಿಟ್ಟಿನ ಮೇಲೆ ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೆಸರಿನ ಸ್ಟಿಕ್ಕರ್ಗಳು ಇದ್ದು ಸೋಷಲ್ ಮಾಧ್ಯಮಗಳಲ್ಲಿ ವೈರಲ್ ಆದ ಬಗ್ಗೆ ಅದಾನಿ ಗ್ರೂಪ್ನ ಜಂಟಿ ಅಧ್ಯಕ್ಷ ರ ಬಳಿ “ಉಡುಪಿ ಟೈಮ್ಸ್” ಸಂಪರ್ಕಿಸಿದಾಗ ಮೇಲಿನ ವಿಷಯ ತಿಳಿಸಿದರು.
ಅದಾನಿ ವತಿಯಿಂದ ಸ್ಥಳೀಯ ಶಾಸಕರು, ಮಾಜಿ ಶಾಸಕರಿಗೆ, ರಾಜಕೀಯಾ ಪಕ್ಷಗಳಿಗೆ ಬಡ ಜನರಿಗೆ ಆಹಾರ ಧಾನ್ಯ ಪೂರೈಸಲು ಎಂಟು ಕ್ವಿಂಟಾಲ್ ಅಕ್ಕಿ, ವಿವಿಧ ಬೆಳೆಕಾಳುಗಳ ಸಹಿತ 20 ಟನ್‌ಗೂ ಅಧಿಕ ಆಹಾರ ಸಾಮಾಗ್ರಿ ಒದಗಿಸಿದ್ದಾಗಿ ಅದಾನಿ ಗ್ರೂಪ್ ನ ಜಂಟಿ ನಿರ್ದೇಶಕ ಕಿಶೋರ್ ಆಳ್ವ ಹೇಳಿದರು.
ಬೆಳಪು ಗ್ರಾಮ ಪಂಚಾಯಯ್ ಅಧ್ಯಕ್ಷ ದೇವಿಪ್ರಸಾದ್ ಅವರ ವಿನಂತಿ ಮೇರೆಗೆ 100 ಆಹಾರ ಧಾನ್ಯಗಳ ಕಿಟ್ ನೀಡಿದ್ದು, ಅದರಲ್ಲಿ ಒಂದು ಬದಿಯಲ್ಲಿ ಯುಪಿಸಿಯಲ್ ಸ್ಟಿಕರ್ ಇದ್ದು, ಇನ್ನೊಂದು ಬದಿಯಲ್ಲಿ ಅವರು ಜನರಿಗೆ ಮನೆಯಲ್ಲೇ ಇದ್ದು, ಸುರಕ್ಷಿತವಾಗಿರಿ ಎಂಬ ಸ್ಲೋಗನ್ ಇರುವ ಲೇಬಲ್ ಹಾಕಿದ್ದಾರೆ. ಇರಲ್ಲಿ ಬೇರೆನೂ ವಿಶೇಷ ಇಲ್ಲ. ಅವರು ಗ್ರಾಮದ ಜನತೆಗೆ ಸಂದೇಶ ನೀಡಿದ್ದಾರೆ, ನಿಮ್ಮ ಕಷ್ಟದ ಸಮಯದಲ್ಲಿ ನಾವು ಇದ್ದೇವೆ. ಪ್ರಧಾನಿಯವರ ಮನವಿ ಮೇರೆಗೆ ಲಾಕ್ ಡೌನ್ ಸಂದರ್ಭ ಮನೆಯಲ್ಲಿಯೇ ಇದ್ದು ಕೊರೋನಾ ದೇಶದಿಂದ ದೂರ ಮಾಡಲು ಕೈಜೋಡಿಸಿ ಎಂದಿದ್ದಾರೆ, ಅದನ್ನೆ ಅವರು ಜನರಿಗೆ ಮನವಿ ಮಾಡಿದ್ದಾರೆ ಎಂದರು.
ವಾಟ್ಸ್ ಆಪ್ ನಲ್ಲಿ ಈ ರೀತಿಯ ವಿಡಿಯೋ ಮಾಡಿ ನನ್ನ ತೆಜೋವಧೆ ಮಾಡಲು ಪ್ರಯತ್ನಿಸಿದ್ದಾರೆ ಇದಕ್ಕೆಲ್ಲ ನಾನು ಜಗ್ಗಲ್ಲ, ನಾನು ಸಮಾಜಮುಖಿ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇನೆ. ಅದಾನಿ ಗ್ರೂಪ್ ನವರು 100 ಆಹಾರ ಧಾನ್ಯದ ಕಿಟ್ ನೀಡಿದ್ದು, ನಾನು ಬೆಳಪು ಗ್ರಾಮ ಪಂಚಾಯತ್ ಸಹಿತ ಹತ್ತಿರ ಊರಿನ ಬಡ ಜನರಿಗೆ 2350 ಕ್ಕೂ ಹೆಚ್ಚೂ ಆಹಾರ ಧಾನ್ಯದ ಕಿಟ್ ಅನ್ನು ವಿವಿಧ ದಾನಿಗಳಿಂದ, ನನ್ನ ಸ್ವಂತ, ಕುಟುಂಬಿಕರ ನೆರವಿನಿಂದ ರೂ.15 ಲಕ್ಷಕ್ಕೂ ಮಿಕ್ಕ ಆಹಾರ ಧಾನ್ಯಗಳ ಕಿಟ್ ಅನ್ನು ನನ್ನ ತೋಟದ ಮನೆಯಲ್ಲಿ ತಯಾರು ಮಾಡಿ ಹಂಚಿದ್ದಾಗಿ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉಡುಪಿ ಟೈಮ್ಸ್ ಗೆ ತಿಳಿಸಿದ್ದಾರೆ.