ಉಡುಪಿ “ಆಲ್ವಿನ್ ಬೇಕರಿ”ಯಲ್ಲಿ ವಿಶೇಷ ತಿಂಡಿ-ತಿನಿಸು, ಕೇಕ್ ಗಳ ಪ್ರದರ್ಶನ ಮತ್ತು ಮಾರಾಟ
ಉಡುಪಿ: ಹಲವಾರು ವರ್ಷಗಳಿಂದ ಶುಚಿ ಮತ್ತು ರುಚಿಗೆ ಮನೆಮಾತಾಗಿರುವ ಉಡುಪಿ ನಗರದ ಹ್ರದಯಭಾಗದ ಸಿ.ಪಿ.ಸಿ. ಪ್ಲಾಜಾದಲ್ಲಿರು, “ಆಲ್ವಿನ್ ಬೇಕರಿ“ಯಲ್ಲಿ ವಿಶೇಷ ತಿಂಡಿ – ತಿನಿಸು, ಕೇಕ್ ಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.
ಇಲ್ಲಿ ಸಾಂಪ್ರದಾಯಿಕ ತಿಂಡಿ – ತಿನಿಸುಗಳ ತಯಾರಿ ಹಾಗೂ ನುರಿತ ಸಿಬಂಧಿ ವರ್ಗದ ಬೆಂಬಲದೊಂದಿಗೆ ತಯಾರಿಸಲ್ಪಡುವ ಸಿಹಿ – ಖಾರತಿಂಡಿ, ಬಿಸ್ಕತ್, ಮ್ಯಾಕ್ರನ್, ಕ್ಯಾಶ್ಯೂ ಸ್ವೀಟ್ಸ್, ಬೆಂಗಾಲಿ ಸ್ವೀಟ್ಸ್ , ಪರಿಶುದ್ಧ ತುಪ್ಪದಲ್ಲಿ ತಯಾರಿಸುವ ಮಾವ ಸ್ವೀಟ್ಸ್ ವಿಶೇಷ ಆಕರ್ಷಣೆಗಳಾಗಿದ್ದು ಬಹುಜನರ ಬೇಡಿಕೆಯಾಗಿದೆ.
ಹಿರಿಯರ ಮಾರ್ಗದರ್ಶನದಲ್ಲಿ ಕ್ರಿಸ್ಮಸ್ ಹಬ್ಬದ ವಿಶೇಷತೆಯಾದ ಕುಸ್ವರ್ ತಿಂಡಿಗಳು, ಮಿಕ್ಸ್ ಕುಸ್ವರ್ , ಡ್ರೈಫ್ರೂಟ್ಸ್, ಮಿಕ್ಸ್ ಸ್ವೀಟ್ಸ್ ಬಾಕ್ಸ್ ಹಾಗೂ ಚಾಕಲೇಟ್ ಗಿಫ್ಟ್ ಬಾಕ್ಸ್, ಕೋಲ್ಡ್ ಸ್ಟೋರೇಜ್ ತಿಂಡಿಗಳು ಹಾಗೂ ಎಲ್ಲಾ ಬಗೆಯ ಕೇಕ್ ಗಳು ಲಭ್ಯವಿದ್ದು ಗ್ರಾಹಕರು ಮುಂಗಡವಾಗಿ ಕಾದಿರಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಕ್ರಿಸ್ಮಸ್ ಸ್ಪೆಷಲ್ ವೈನ್ ಕೇಕ್ ಬಾದಾಮ್, ಚೆರ್ರಿ, ಕ್ಯಾಂಡಿ, ಜಿಂಜರ್ ಪೀಲ್ ಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ದ್ರಾಕ್ಷಿ ಗೋಡಂಬಿಗಳೊಂದಿಗೆ ಚೆನ್ನಾಗಿ ಬೆರೆಸಿ ವೈನ್ ನಲ್ಲಿ ತಿಂಗಳ ಪೂರ್ವದಲ್ಲಿ ನೆನೆಸಿಟ್ಟು ಕೇಕ್ ತಯಾರಿಸುವಾಗ ಇದನ್ನು ಉಪಯೋಗಿಸಲಾಗುತ್ತದೆ. ಸ್ಪಾಂಜ್ ಕೇಕ್ ವಿದ್ ಬಟರ್ ಐಸಿಂಗ್, ಫ್ರೆಶ್ ಕ್ರೀಮ್ ಗಳಾದ ಬ್ಲ್ಯಾಕ್ ಫಾರೆಸ್ಟ್, ಫೈನಾಪಲ್, ಸ್ಟ್ರಾಬೆರಿ ಕೇಕ್, ಪ್ಲಮ್ ಕೇಕ್, ರಿಚ್ ಪ್ಲಮ್ ಕೇಕ್ ಗಳು ಲಭ್ಯವಿದೆ. ಗ್ರಾಹಕರ ಬಹುಬೇಡಿಕೆಯ ಕೋಲ್ಡ್ ಕೇಕ್, ಫ್ರೆಶ್ ಫ್ರೂಟ್ಸ್ ಕ್ರೀಮ್ ಕೇಕ್ ಇತ್ಯಾದಿ ವಿಶೇಷ ಸದಭಿರುಚಿಯ ಸ್ವಾದಿಷ್ಟ ಕಾರ ಕೇಕ್ ಗಳು ದೊರೆಯಲಿವೆ.
ಹಾಗಾದರೆ ಇನ್ನೇಕೆ ತಡ ಇಂದೇ ಭೇಟಿ ನೀಡಿ ನಮ್ಮೂರಿನ ಬೇಕರಿ ಆಲ್ವಿನ್ ಬೇಕರಿಗೆ….