ಉಡುಪಿ: ನಿವೃತ್ತ ಪಿ.ಎಸ್.ಐ. ವಿಜಯ ಅಮೀನ್ ಬ್ರಹ್ಮಾವರ (61) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿರುತ್ತಾರೆ. ನಿವೃತ್ತ ಪೊಲೀಸ್ ಅಧಿಕಾರಿ ಕ್ಷೇಮಾಭಿವೃದ್ಧಿ ಸಂಘವು ಸಂತಾಪ ವ್ಯಕ್ತಪಡಿಸಿದೆ.
ವಿಜಯ್ ಅವರು ಮಣಿಪಾಲ, ಶಂಕರನಾರಾಯಣ, ಕೊಲ್ಲೂರು, ಡಿಎಸ್‌ಬಿ ಉಡುಪಿ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದರು.