ದಲಿತ ಸಮುದಾಯ ಮತ್ತು ಅಂಬೇಡ್ಕರ್‌ರಿಗೆ ಅವಮಾನ- ಹಿಂದೂ ಜಾಗರಣ ವೇದಿಕೆಯ ಸಹಸಂಚಾಲಕನ ವಿರುದ್ಧ ದೂರು
ಉಡುಪಿ: ದಲಿತ ಸಮುದಾಯ ಮತ್ತು ಬಾಬಾ ಸಾಹೇಬರಿಗೆ ಅವಹೇಳನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಕಳ ತಾಲೂಕು ಸಹಸಂಚಾಲಕ ಉಮೇಶ ನಾಯ್ಕ್ ಸೂಡ ವಿರುದ್ಧ ಉಡುಪಿ ಡಿವೈಎಸ್ಪಿ ಅವರಿಗೆ ದಲಿತ ಸಂಘಟನೆಗಳು ದೂರು ನೀಡಿದರು.
ದಲಿತ ಸಮುದಾಯ ಮತ್ತು ಅಂಬೇಡ್ಕರ್ ಅವರನ್ನು ಅವಮಾನಿಸಿದ ಉಮೇಶ್ ನಾಯ್ಜ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಪೊಲೀಸ್ ಇಲಾಖೆಗೆ ನೀಡಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕರ ಅನುಪಸ್ಥಿತಿಯಲ್ಲಿ ಉಡುಪಿ ಪೊಲೀಸ್ ಉಪಾಧೀಕ್ಷಕ ಡಿ.ಟಿ. ಪ್ರಭು ಮನವಿ ಸ್ವೀಕರಿಸಿದರು. ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಶಾಮರಾಜ ಬಿರ್ತಿ,ಮಂಜುನಾಥ ಗಿಳಿಯಾರು, ಶಾಮಸುಂದರ ತೆಕ್ಕಟ್ಟೆ, ಕುಮಾರ್ ಕೋಟ, ಹರಿಶ್ಚಂದ್ರ ಕೆ.ಡಿ.,ಶಿವಾನಂದ ಬಿರ್ತಿ, ಶಿವಾನಂದ ಮೂಡಬೆಟ್ಟು, ರಾಘವೇಂದ್ರ ಬೆಳ್ಳೆ, ಶ್ರೀಧರ ಕುಂಜಿಬೆಟ್ಟು ಇತರರು ಇದ್ದರು.
ಅಂಬೇಡ್ಕರ್ ಮತ್ತು ದಲಿತರಿಗೆ ಅವಮಾನ ಉಮೇಶ ನಾಯ್ಕನನ್ನು ಈ ಕೂಡಲೇ ಬಂಧಿಸಿ : ಸುಂದರ ಮಾಸ್ತರ್…
ಹಿಂದು ಜಾಗರಣಾ ವೇಧಿಕೆಯ ಮುಖಂಡ ಉಮೇಶ ನಾಯ್ಕ ಸ್ವತಃ ಮರಾಠಿಗರು ದಲಿತರಲ್ಲಾ ಆಮಂತ್ರಣ ಪತ್ರಿಕೆಯಲ್ಲಿರುವ ಅಂಬೇಡ್ಕರ್ ಭಾವಚಿತ್ರವನ್ನು ತೆಗೆದು ಶಿವಾಜಿಯ ಫೋಟೋ ಹಾಕಬೇಕು. ದಲಿತರು ದನದ ಮತ್ತು ಕೋಣದ ಮಾಂಸ ತಿನ್ನುವವರು. ಸ್ಮಶಾನದಲ್ಲಿ ಮಲಗುವವರು ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕರೆಕೊಟ್ಟಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಅದು ವೈರಲ್ ಆಗಿದೆ. ಸಾರ್ವಜನಿಕವಾಗಿ ರಾಷ್ಟ್ರ ನಾಯಕ, ವಿಶ್ವ ರತ್ನ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ಮತ್ತು ದಲಿತರು ದನದ, ಕೋಣದ ಮಾಂಸ ತಿಂದು ಸ್ಮಶಾನದಲ್ಲಿ ಮಲಗುವವರು ಎಂದು ಸಾರ್ವಜನಿಕವಾಗೀ ನಿಂದನೆ ಮಾಡಿದ ಉಮೇಶ ನಾಯ್ಕ ಈ ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.