ಉಡುಪಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್- ಆವೆ ಮಣ್ಣಿನ ಗಣೇಶನ ವಿಗ್ರಹ ರಚನಾ ಸ್ಪರ್ಧೆ

ಉಡುಪಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ಆಶ್ರಯದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಿಗೆ ಪರಿಸರ ಸ್ನೇಹಿ ಗಣಪತಿಗಳಾದ ಮಣ್ಣು, ಹಿಟ್ಟು, ಅರಶಿಣ, ಸೆಗಣಿ ಮುಂತಾದವುಗಳಿಂದ ಗಣಪತಿಯನ್ನು ಸಿದ್ಧಪಡಿಸಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವ ಸ್ಪರ್ಧೆ ಆಯೋಜಿಸಲಾಗಿದೆ.

ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ ಇವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಸ್ಕೌಟ್ -ಗೈಡ್ಸ್ ಮಕ್ಕಳಿಗೆ ಆವೆ ಮಣ್ಣಿನಲ್ಲಿ ಗಣೇಶನ ವಿಗ್ರಹ ರಚನಾ ಸ್ಪರ್ಧೆಯನ್ನು ಸೆ.06 ರ ಶುಕ್ರವಾರ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲಿನ ಪ್ರಾಥಮಿಕ ವಿಭಾಗದಲ್ಲಿ ಏರ್ಪಡಿಸಲಾಗಿದೆ.

ಸ್ಕೌಟ್-ಗೈಡ್ಸ್, ಬನ್ನಿಸ್, ಕಬ್, ಬುಲ್‌ಬುಲ್, ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳಿಗೆ ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಹೆಚ್ಚಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು, ಸ್ಕೌಟ್ ಗೈಡ್ಸ್ನ ಎಲ್ಲಾ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳು, ಅಧ್ಯಕ್ಷರು, ಖಜಾಂಚಿಗಳು ಪ್ರೋತ್ಸಾಹಿಸಿ ಹೆಸರನ್ನು ನೋಂದಾಯಿಸುವಂತೆ ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಸುಮನ ಶೇಖರ್‌ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಸ್ಪರ್ಧೆಯಲ್ಲಿ ವಿಗ್ರಹ ತಯಾರು ಮಾಡುವರೇ ಆವೆ ಮಣ್ಣನ್ನು(ಕ್ಲೇ) ಸಂಘಟಕರೇ ಒದಗಿಸಲಿದ್ದು, ಸ್ಪರ್ಧೆಗೆ ಹೆಸರನ್ನು ರಮೇಶ್ ಅಂಬಾಡಿ 9964070588 ಇವರಲ್ಲಿ ನೋಂದಾಯಿಸುವಂತೆ ವಿನಂತಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!