ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದರೆ 17 ಕೋಟಿ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯ!
ನವದೆಹಲಿ: ಮುಂದಿನ ಮಾರ್ಚ್ ಅಂತ್ಯದ ವೇಳೆಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡದಿದ್ದರೆ ದೇಶದಲ್ಲಿ 17 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗಲಿದೆ.
2020ರ ಮಾರ್ಚ್ 31ರೊಳಗೆ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಪ್ಯಾನ್ ನಿಷ್ಕ್ರಿಯಗೊಂಡು ಪ್ರಯೋಜನಕ್ಕೆ ಬಾರದಂತೆ ಆಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಪ್ಯಾನ್ ಮತ್ತು ಆಧಾರ್ ಸಂಪರ್ಕಿಸುವ ಗಡುವನ್ನು ಈಗಾಗಲೇ ಹಲವು ಭಾರಿ ವಿಸ್ತರಿಸಲಾಗಿದೆ ಮತ್ತು ಇತ್ತೀಚಿನ ಗಡುವು ಬರುವ ಮಾರ್ಚ್ 31, 2020ಕ್ಕೆ ಕೊನೆಯಾಗಲಿದೆ ಎಂದೂ ಇಲಾಖೆ ಹೇಳಿದೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಈಗಾಗಲೇ 30.75 ಕೋಟಿಗೂ ಹೆಚ್ಚು ಪ್ಯಾನ್‌ಗಳನ್ನು ಆಧಾರ್‌ಗೆ ಜೋಡಿಸಲಾಗಿದ್ದು 17.58 ಕೋಟಿ ಪ್ಯಾನ್‌ಗಳನ್ನು ಇನ್ನೂ 12-ಅಂಕಿಯ ಬಯೋಮೆಟ್ರಿಕ್ ಐಡಿಯೊಂದಿಗೆ ಜೋಡಿಸಲಾಗಿಲ್ಲ.
ಸುಪ್ರೀಂ ಕೋರ್ಟ್ 2018ರ ಸೆಪ್ಟೆಂಬರ್‌ನಲ್ಲಿ ಆಧಾರ್ ಅನ್ನು ಸಾಂವಿಧಾನಿಕವಾಗಿ ಮಾನ್ಯ ಎಂದು ಘೋಷಿಸಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಪ್ಯಾನ್ ಕಾರ್ಡ್‌ಗಳ ಹಂಚಿಕೆಗೆ ಬಯೋಮೆಟ್ರಿಕ್ ಐಡಿ ಕಡ್ಡಾಯ ಎಂದೂ ಅಭಿಪ್ರಾಯಪಟ್ಟಿತ್ತು.