ಶಾಲಾ ವಿದ್ಯಾರ್ಥಿಗಳಿಗಾಗಿ ಮುದ್ದುರಾಮ ಸ್ಪರ್ಧೆ, ಪ್ರಭು ಶ್ರೀರಾಮನ ಚಿತ್ರ ಬಿಡಿಸುವ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ
ಉಡುಪಿ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ (SASS) ಇದರ ಜಿಲ್ಲಾ ಘಟಕ, ಜಿಲ್ಲಾ ಮಹಿಳಾ ಘಟಕ, ಕೊಡವೂರು, ಶ್ರೀ ಶಿರಡಿ ಸಾಯಿಬಾಬಾ ಮಂದಿರ ತೋಟದಮನೆ, ಮತ್ತು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಇವರ ಜಂಟಿ ಆಶ್ರಯದಲ್ಲಿ, ಜ.21 ರ ಭಾನುವಾರದಂದು, ಕೊಡವೂರಿನ ಶ್ರೀಶಿರಡಿಸಾಯಿಬಾಬಾ ಮಂದಿರದಲ್ಲಿ “ಶ್ರೀ ರಾಮೋತ್ಸವ” ಕಾರ್ಯಕ್ರಮವು ನಡೆಯಲಿದ್ದು, ಶಾಲಾ ವಿದ್ಯಾರ್ಥಿಗಳಿಗಾಗಿ ಮುದ್ದುರಾಮ ಸ್ಪರ್ಧೆ ಹಾಗೂ, ಪ್ರಭು ಶ್ರೀರಾಮನ ಚಿತ್ರ ಬಿಡಿಸುವ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯೂ ನಡೆಯಲಿರುವುದು.
ಸ್ಪರ್ಧೆಗಾಗಿ ಹೆಸರು ನೋಂದಾಯಿಸಲು ಬಯಸುವ ವಿದ್ಯಾರ್ಥಿಗಳು ಜ.18 ರ ಒಳಗಾಗಿ ಈ ಕೆಳಗೆ ನಮೂದಿಸಿರುವ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಹೆಸರನ್ನು ನೋಂದಾಯಿಸಬೇಕಾಗಿ ಕಾರ್ಯಕ್ರಮದ ಸಂಯೋಜಕರಾಗಿರುವ ವಿಜಯ್ ಕೊಡವೂರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಬೆಳಗ್ಗೆ 9 ಗಂಟೆಗೆ ಸರಿಯಾಗಿ ನಡೆಯುವ ಸ್ಪರ್ಧೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗದಲ್ಲಿ ನಡೆಯುವುದು. ಪ್ರತೀ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ವಿದ್ದು, 10 ಆಕರ್ಷಕ ಪ್ರೋತ್ಸಾಹ ಬಹುಮಾನಗಳನ್ನೂ ನೀಡಲಾಗುವುದು. ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ: 7676213368.ರಂಜಿತ್ ಶೆಟ್ಟಿ, 9448216491.ಗಣೇಶ್ ಕೋಟ.