“ಗೀತಾಂಜಲಿ ಸಿಲ್ಕ್ಸ್” ದೀಪಾವಳಿ ಉತ್ಸವ ಕೊಡುಗೆಗಳ ಮಹಾಪುರ ಆರಂಭ

ಉಡುಪಿ, ನ.6: ಕರಾವಳಿ ಕರ್ನಾಟಕದ ಅತೀ ವಿಶಾಲವಾದ ಬಟ್ಟೆ ಮಳಿಗೆ “ಗೀತಾಂಜಲಿ ಸಿಲ್ಕ್ಸ್” ದೀಪಾವಳಿ ಉತ್ಸವಕ್ಕೆ ಸಜ್ಜಾಗಿದೆ. ಈ ಬಾರಿ ವಿಶೇಷವಾಗಿ ಎಲ್ಲ ವಯೋಮಾನಾದವರಿಗೆ ಸರಿ ಹೊಂದುವಂತೆ ಗುಣಮಟ್ಟದ ಉಡುಗೆ ತೊಡುಗೆಗಳು ಅತೀ ಕಡಿಮೆ ದರದಲ್ಲಿ ದೊರೆಯಲಿವೆ. ಗ್ರಾಹಕರ ಮನಮೆಚ್ಚುವಂತೆ ಎಲ್ಲ ರೀತಿಯ ಶುಭ ಸಮಾರಂಭಗಳಿಗೆ ಒಪ್ಪುವ ನೂತನ ಶೈಲಿಯ ವಸ್ತಗಳ ಅಪಾರ ಸಂಗ್ರಹ ಇಲ್ಲಿದೆ.

ಒಂದೇ ಸೂರಿನಡಿ ಎಲ್ಲ ಉಡುಪುಗಳು:- ನೆಲಮಹಡಿ ಸೇರಿದಂತೆ ಮಹಡಿಗಳಲ್ಲಿ ಎಲ್ಲ ವಯೋ ಮಾನದವರ ಪ್ರತ್ಯೇಕ ವಿಭಾಗಗಳಿವೆ. ಸಿದ್ಧ ಉಡುಪು, ಸಾಂಪ್ರದಾಯಿಕ ಉಡುಗೆ, ಮಹಿಳೆಯರು ಇಷ್ಟಪಡುವ ಕಾಂಚಿ ಸೀರೆ, ಟಿಶ್ಯೂ ಸೀರೆ, ಕಾಟನ್ ಸೀರೆ, ಲಿನನ್ ಸೀರೆ, ಬಾರ್ಡರ್ ಸೀರೆ, ಫ್ಯಾನ್ಸಿ ಸೀರೆಗಳು, ಗಾಗ್ರಾ, ಗೌನ್, ಕ್ರಾಪ್ ಟಾಪ್,ಗರಾರಾ, ಪಲಾಝೊ ಸೆಟ್ ಗಳು, ಜೈಪುರ್ ಕಾಟನ್ ಸೆಟ್, ಜೀನ್ಸ್ ಕುರ್ತಾಟಾಪ್, ಪುರುಷರ ಎಲ್ಲ ಬಗೆಯ ಬ್ಯಾಂಡೆಡ್ ಶರ್ಟ್, ಟೌಶರ್ಸ್, ಶೆರ್ವಾನಿ, ಸೂಟ್, ಇಂಡೋ ವೆಸ್ಟರ್ನ್, ಜೋಧಪುರಿ, ದಿನಧಾರಣೆಯ ಟಿ-ಶರ್ಟ್, ಬರ್ಮುಡಾ, ಮಕ್ಕಳ ಬಟ್ಟೆಗಳು, ಗಂಡುಮಕ್ಕಳ ಶೇರ್ವಾನಿ, ಸೂಟ್, ಬಾಬಾ ಸೂಟ್, ಶರ್ಟ್, ಪ್ಯಾಂಟ್, ಕುರ್ತಾ ಸೆಟ್, ಬ್ಯಾಂಡೆಡ್ ಶರ್ಟ್, ಟೌಶರ್ಸ್, ಹೆಣ್ಣು ಮಕ್ಕಳುಇಷ್ಟಪಡುವಂತಹ ಕಾಟನ್ ಫ್ರಾಕ್, ಫ್ಯಾನ್ಸಿ ಫ್ರಾಕ್ಸ್, ಗೌನ್, ಸೀರೆ, ಮಕ್ಕಳ ಸಿದ್ಧ ಉಡುಪುಗಳು ಹಾಗೂ ಇನ್ನಿತರ ಹೊಸ ವಿನ್ಯಾಸದ ಉಡುಗೆಗಳ ಬೃಹತ್ ಸಂಗ್ರಹ ಲಭ್ಯವಿದೆ.

ಆಮದು ವಸ್ತ್ರಗಳ ಸಂಗ್ರಹ:- ದೇಶಾದ್ಯಂತ ವಿಭಿನ್ನ ಸಂಸ್ಕೃತಿಯಲ್ಲಿ ವಿಭಿನ್ನ ವಸ್ತ್ರಗಳ ಧಾರಣೆ ವಿಶೇಷವಾಗಿದೆ. ನಿಟ್ಟಿನಲ್ಲಿ ಕರಾವಳಿಯಲ್ಲೂ ಅಂತಹ ಬಟ್ಟೆಗಳ ಸಂಗ್ರಹ ದೊರೆಯಬೇಕು ಎನ್ನುವುದು ಗೀತಾಂಜಲಿಯ ಅಪೇಕ್ಷೆ. ಆದ್ದರಿಂದ ಭಾರತದ ಬೇರೆ ಬೇರೆ ಕಡೆಯ ವಿಶೇಷ ಉಡುಪುಗಳ ಸಂಗ್ರಹ, ಆಮದು ವಸ್ತ್ರಗಳ ಸಂಗ್ರಹವನ್ನು ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ವೈಶಿಷ್ಟ್ಯಗಳು:- ಪ್ರತ್ಯೇಕ ಹೊಲಿಗೆ ಕೇಂದ್ರ, ನೆಲ ಮಹಡಿಯಲ್ಲಿ ನ್ಯೂ ಶಾಂತಿ ಸಾಗರ್ ರೆಸ್ಟೋರೆಂಟ್, ನೆಲ ಅಂತಸ್ತಿನಲ್ಲಿ ವಿಶಾಲವಾದ 120 ವಾಹನಗಳ ವ್ಯಾಲೆಟ್ ಪಾರ್ಕಿಂಗ್ ವ್ಯವಸ್ಥೆ ಮಳಿಗೆ ರವಿವಾರವೂ ತೆರೆದಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!