ಮಲ್ಪೆ: ಗೆಸ್ಟ್‌ಹೌಸ್‌‌‌ಗೆ ಪೊಲೀಸ್ ದಾಳಿ

ಮಲ್ಪೆ: ಯಾವುದೇ ಪರವಾನಿಗೆ ಇಲ್ಲದೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿದ್ದ ಬಡಾನಿಡಿಯೂರು ಕದಿಕೆ ಗೆಸ್ಟ್ ಹೌಸ್‌‌‌ಗೆ ಮಲ್ಪೆ ಪೊಲೀಸರು ದಾಳಿ ನಡೆಸಿದ್ದಾರೆ.

ಯಾವುದೇ ಪರವಾನಿಗೆ ಇಲ್ಲದ ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಕಾಣುವ ಹಾಗೆ ನೆಲದ ಮೇಲೆ ಕುಳಿತು ಮದ್ಯಸೇವನೆ ಸೇವಿಸುತ್ತಿದ್ದ ಖಚಿತ ಮಾಹಿತಿಯಂತೆ ಮಲ್ಪೆ ಪೊಲೀಸ್‌ ಠಾಣೆಯ ಎಸ್ಐ ಶನಿವಾರ ರಾತ್ರಿ ಬಡಾನಿಡಿಯೂರು ಕದಿಕೆಯ ಶಾಂತಿ ಗೆಸ್ಟ್ ಹೌಸ್‌‌ಗೆ ದಾಳಿ ನಡೆಸಿದ್ದಾರೆ.

ದಾಳಿ ಸಂದರ್ಭದಲ್ಲಿ ಮದ್ಯ ಸೇವಿಸುತ್ತಿದ್ದ ಆರೋಪಿಗಳಾದ 1)ಪ್ರಸಾದ್‌ 2)ಲತೀಶ 3) ಪ್ರೀತಮ್‌ 4) ರಂಜಿತ್‌ 5)ಲೊಕೇಶ್‌ 6)ಬಾಲರಾಜ್‌ 7) ಪ್ರದೀಪ್‌ 8) ಮಿಥುನ್‌ 9) ಶರತ್‌ 10) ಅಭಿ  11)ಸಂದೇಶ  12)ಅಜ್ಞೆಶ್‌ 13) ಪರಶು ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.

ದಾಳಿ ಸಂದರ್ಭದಲ್ಲಿ ಸಾವಿರಾರು ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮದ್ಯಪಾನಕ್ಕೆ ಅನುವು ಮಾಡಿಕೊಟ್ಟ ಮಾಲಕ ಸಂದೀಪ ಸಹಿತ 14 ಮಂದಿಯ ವಿರುದ್ಧ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 95/2023 ಕಲಂ: 15 KE Act ನಂತೆ ಪ್ರಕರಣ ದಾಖಲಾಗಿದೆ.

ಗೆಸ್ಟ್‌ಹೌಸ್, ಹೋಮ್‌ಸ್ಟೇ, ರೆಸಾರ್ಟ್‌ಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ, ಮದ್ಯ ಸೇವನೆ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ಮಲ್ಪೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!