ಅಕ್ರಮ ಮರಳು ಸಾಗಾಟ: ಮೂವರ ಬಂಧನ

ಉಡುಪಿ:ಬೆಳ್ಳಂಪಳ್ಳಿ ಗ್ರಾಮದ ಪುಣಚುರು ಹೊಳೆಯಿಂದ ಅಕ್ರಮ ಮರಳು ತೆಗೆದು ಸಾಗಾಟ ಮಾಡುತ್ತಿದ್ದ ಟೊಂಪೋ ಸಹಿತ ಮೂವರನ್ನು ಬಂಧಿಸಿದ ಹಿರಿಯಡ್ಕ ಪೊಲೀಸರು.

ಕಳೆದ ಕೆಲವು ದಿನಗಳಿಂದ ಬೆಳ್ಳಂಪಳ್ಳಿ ಪುಣಚುರು ಹೊಳೆಯಲ್ಲಿ ಅಕ್ರಮವಾಗಿ ಮರಳು ತೆಗೆ ದು ಸಾಗಾಟ ಮಾಡುತ್ತಿದ್ದ ಬಗ್ಗೆ ಹಿರಿಯಡ್ಕ ಪೊಲೀಸರಿಗೆ ಬಂದ ಖಚಿತ ಮಾಹಿತಿ ಅನುಸಾರ ಇಂದು ಸಂಜೆ ದಾಳಿ ಮಾಡಿದ ಠಾಣಾಧಿಕಾರಿ ರಾಘವೇಂದ್ರ ಅವರ ನೇತೃತ್ವದ ತಂಡ ಮಧುಕರ ಪೂಜಾರಿ, ಮಾಲಕ ನಾಗರಾಜ್ ಶೆಟ್ಟಿ, ಗೀರೀಶ್ ಶೆಟ್ಟಿ ಅವರನ್ನು ಬಂಧಿಸಿದ್ದಾರೆ.ದಾಳಿ ಸಂದರ್ಭ5000 ಸಾವಿರ ಮೌಲ್ಯದ ಅಕ್ರಮ ಮರಳು ಮತ್ತು ಸಾಗಾಟಕ್ಕೆ ಉಪಯೋಗಿಸಿದ 407 ಟೆಂಪೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!