11 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು :ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇಂದು ಮದ್ಯಾಹ್ನ ಎಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿ ಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಸಭೆಯ ಬೆನ್ನಲ್ಲೇ 11 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ನೂತನ ಪೊಲೀಸ್ ಕಮಿಷನರ್ ಆಗಿ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎ. ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಕ ಮಾಡಲಾಗಿದೆ.ಸಂದೀಪ್ ಪಾಟೀಲ್ ಅವರನ್ನು ಡಿಐಜಿ ಮತ್ತು ಬೆಂಗಳೂರು ನಗರ ಅಪರಾಧ ಇಲಾಖೆಯ ಜಂಟಿ ಆಯುಕ್ತರಾಗಿ ತಕ್ಷಣದಿಂದಲೇ ಅಧಿಕಾರಕ್ಕೆ ಬರುವಂತೆ ನಿಯೋಜಿಸಲಾಗಿದೆ. ಎ. ಸುಬ್ರಹ್ಮಣ್ಯೇಶ್ವರ ಮೈಸೂರು ಕಮಿಷರನ್ , ಬೆಂಗಳೂರು ಇಂಟೆಲಿಜನ್ಸ್ ಡಿಐಜಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನಿಯುಕ್ತಿಗೊಂಡಿದ್ದಾರೆ.
ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು
- ಡಾ.ಅಮರ್ ಕುಮಾರ್ ಪಾಂಡೆ, ಎಡಿಜಿಪಿ, ಲಾ ಅಂಡ್ ಆರ್ಡರ್
- ಕಮಲ್ ಪಂಥ್, ಎಡಿಜಿಪಿ, ಇಂಟಲಿಜೆನ್ಸ್ ವಿಭಾಗ
- ಬಿ.ದಯಾನಂದ್, ಐಜಿಪಿ, ಕರ್ನಾಟಕ ರಿಸರ್ವ್ ಪೊಲೀಸ್
- ಎಂ.ಚಂದ್ರಶೇಖರ್, ಐಜಿಪಿ, ಎಸಿಬಿ
- ಸಂದೀಪ್ ಪಾಟೀಲ್, ಡಿಐಜಿ ಮತ್ತು ಜಂಟಿ ಆಯುಕ್ತರು ಅಪರಾಧ ವಿಭಾಗ, ಬೆಂಗಳೂರು
- ಎನ್.ಸಿದ್ರಾಮಪ್ಪ, ಆಯುಕ್ತರು, ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಸಾರ್ವಜನಿಕ ಸಂಪರ್ಕ
- ಚೇತನ್ ಸಿಂಗ್ ರಾಥೋಡ್, ಡಿಸಿಪಿ ಬೆಂಗಳೂರು ಕೇಂದ್ರ ವಿಭಾಗ
- ಅನೂಪ್.ಎ.ಶೆಟ್ಟಿ, ಎಸ್ಪಿ, ರಾಮನಗರ
- ಕೆಎಂ ಶಾಂತರಾಜು, ಎಸ್ಪಿ, ಶಿವಮೊಗ್ಗ
- ಹನುಮಂತರಾಯ, ಎಸ್ಪಿ, ದಾವಣಗೆರೆ.