ಕೊರೋನ ನಿಯಂತ್ರಣಕ್ಕೆ ನಿರ್ಮಿತಿ ಕೇಂದ್ರದಿಂದ 1 ಕೋಟಿ ರೂ ದೇಣಿಗೆ

ಉಡುಪಿ: ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಕುರಿತು ಸರ್ಕಾರ ಕೈಗೊಂಡಿರುವ
ಕಾರ್ಯಗಳಿಗಾಗಿ ಉಡುಪಿ ನಿರ್ಮಿತಿ ಕೇಂದ್ರದಿಂದ 1 ಕೋಟಿ ರೂ.ಗಳ ಚೆಕ್ ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಗುರುವಾರ ನೀಡಲಾಯಿತು.


ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಉಡುಪಿ ನಿರ್ಮಿತಿ ಕೇಂದ್ರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ಮತ್ತು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಚೆಕ್ ನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ನಿರ್ಮಿತಿ ಕೇಂದ್ರದ ಲಾಭಾಂಶದಲ್ಲಿ 1 ಕೋಟಿ ರೂ ಗಳನ್ನು ಕೊರೋನಾ ನಿಯಂತ್ರಣ ಕುರಿತು ಸರ್ಕಾರದ ಕಾರ್ಯಗಳಿಗೆ ನೆರವಾಗಲು ನೀಡಲಾಗಿದೆ , ಎಂದು ತಿಳಿಸಿದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಷಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!