ರಾಜ್ಯದಲ್ಲಿ₹10 ಲಕ್ಷ ಕೋಟಿ ವಕ್ಫ್ ಆಸ್ತಿ ಕಬಳಿಕೆ: ಎನ್.ಕೆ.ಎಂ.ಶಾಫಿ
ಪಡುಬಿದ್ರಿ: ‘ರಾಜ್ಯದಲ್ಲಿ ಸುಮಾರು ₹10 ಲಕ್ಷ ಕೋಟಿ ವಕ್ಫ್ ಬೋರ್ಡ್ ಆಸ್ತಿ ಕಬಳಿಕೆ ಆಗಿದೆ’ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ಫ್ ಬೋರ್ಡ್ ರಾಜ್ಯ ಸದಸ್ಯ ಎನ್.ಕೆ. ಎಂ. ಶಾಫಿ ಸಅದಿ ಆರೋಪಿಸಿದರು.
ಮೂಳೂರು ಜುಮ್ಮಾ ಮಸೀದಿಯ ಸೈಯ್ಯದ್ ಅರಬೀ ವಲಿಯಲ್ಲಾಹಿ ದರ್ಗಾ ಶರೀಫ್‌ನ ಉರೂಸ್ ಝಿಯಾರತ್‌ನ ಸಮಾರೋಪ ಸಮಾರಂಭದಲ್ಲಿ ಅವರು ಭಾನುವಾರ ರಾತ್ರಿ ಮಾತನಾಡಿದರು.
‘ರಾಜ್ಯದಲ್ಲಿ 95ಲಕ್ಷಕ್ಕೂ ಹೆಚ್ಚು ಮುಸ್ಲಿಮರಿದ್ದು, ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳಲ್ಲಿ ಮುಸ್ಲಿಮರ ಸಂಖ್ಯೆ ವಿರಳ. ಸಮುದಾಯ ಶೈಕ್ಷಣಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಪ್ರಗತಿ ಹೊಂದಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಕಾರ್ಯಕ್ರಮ ರೂಪಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ‘ಉರೂಸ್‌ನಂತಹ ಕಾರ್ಯಕ್ರಮಗಳು ಸೌಹಾರ್ದತೆಯ ಪ್ರತೀಕವಾಗಿದೆ. ಧರ್ಮ ಧರ್ಮಗಳ ಮಧ್ಯೆ ಕಂದಕ ಉಂಟು ಮಾಡುವ ಶಕ್ತಿಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ’ ಎಂದರು.
ಅಸಯ್ಯದ್ ನಿಝಾಮುದ್ದೀನ್ ಬಾಫಕಿ ತಂಙಳ್ ದುವಾ ನೆರವೇರಿಸಿದರು. ಮೂಳೂರು ಜುಮ್ಮಾ ಮಸೀದಿ ಮುದರ್ರಿಸ್ ಬಿ.ಕೆ. ಅಬ್ದುಲ್‌ರಹ್ಮಾನ್ ಮದನಿ ಉದ್ಘಾಟಿಸಿದರು. ಸೈಯ್ಯದ್ ಅರಬೀ ದರ್ಗಾ ಶರೀಫ್ ಸಮಿತಿಯ ಅಧ್ಯಕ್ಷ ಎಂ.ಎಸ್. ಅಬ್ದುರ್ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಮೂಳೂರು ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಎಚ್.ಬಿ. ಮುಹಮ್ಮದ್, ಮೂಳೂರು ಜುಮ್ಮಾಮಸೀದಿ ಸಹಖತೀಬ್ ಹೈದರ್ ಆಲಿ ಅಹ್ಸನಿ ಮೂಳೂರು, ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ನೇಜಾರ್, ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ,
ಮೂಳೂರು ಜುಮಾ ಮಸೀದಿ ಗೌರವಾಧ್ಯಕ್ಷ ಹಸನ್ ಮೊಯಿದಿನ್, ಉದ್ಯಮಿ ಖಾದರ್ ಅದ್ದು ಉಚ್ಚಿಲ, ಸುನ್ನೀ ಸೆಂಟರ್ ವ್ಯವಸ್ಥಾಪಕ ಯು.ಕೆ. ಮುಸ್ತಫಾ ಸಅದಿ, ಇಸ್ಹಾಕ್ ಫೈಝಿ, ಎಸ್‌ಐಎ ಮದರ ಅಧ್ಯಕ್ಷ ಎಂ.ಎ.ಬಾವು, ಕಾಪು ಮುಸ್ಲಿಂ ಜಮಾಅತ್ ಅಧ್ಯಕ್ಷ ಹಮೀದ್ ಅದ್ದು, ದಫ್ ಸಮಿತಿಯ ಅಧ್ಯಕ್ಷ ವೈ.ಬಿ.ಸಿ. ಅಹಮದ್ ಬಾವ, ದಫ್ ಅಸೋಸಿಯೇಶನ್ ಜಿಲ್ಲಾ ಘಟಕದ ಎಂ. ಅಬ್ಬು ಮುಹಮ್ಮದ್, ಅಬ್ದುಲ್ಲಾ ಅಹ್ಮದ್, ಹುಸೈನ್ ಅಬ್ದುರ್ರಹ್ಮಾನ್, ಮನ್ಸೂರ್ ಅಬ್ದುಲ್ ಖಾದರ್, ಇಬ್ರಾಹಿಂ ತವಕ್ಕಲ್, ಅಬ್ದುಲ್ ಹಮೀದ್ ಯೂಸುಫ್, ಶರೀಫ್ ಬಾವು ಕೊಪ್ಪಲಂಗಡಿ, ಝಮೀರ್ ಅಬ್ದುರ್ರಹ್ಮಾನ್, ಹನೀಫ್ ಎಂ.ಎ. ಖಾದರ್, ಮೂಳೂರು ಜುಮ್ಮಾ ಮಸೀದಿ ಕಾರ್ಯದರ್ಶಿ ವೈ.ಬಿ.ಸಿ. ಬಶೀರ್ ಆಲಿ ಇದ್ದರು.