ಹೆಬ್ರಿ: ಹೂತಿಟ್ಟ ಕೋಟ್ಯಾಂತರ ಬೆಲೆಯ ಮರದ ದಿಮ್ಮಿ ವಶ, ಬಿಜೆಪಿ ಮುಖಂಡ ಪರಾರಿ
ಹೆಬ್ರಿ : ಕಾರ್ಕಳ ತಾಲೂಕು ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ, ಸಮಾಜ ಸೇವಕ ತನ್ನ ಕೊಪ್ಪರಗುಂಡಿ ಮನೆಯ ಪರಿಸರದಲ್ಲಿ ಮಣ್ಣಿನ ಅಡಿಯಲ್ಲಿ ಹೂತಿಟ್ಟ ಕೋಟ್ಯಾಂತರ ರೂಪಾಯಿ ಬೆಲೆಯ ನೂರಕ್ಕೂ ಹೆಚ್ಚು ಮರದ ದಿಮ್ಮಿಯನ್ನು ಜೆಸಿಬಿಯ ಮೂಲಕ ಅಗೆದು ಭಾನುವಾರ ದಿನವಿಡಿ ಕಾರ್ಯಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಅಗೆದಷ್ಟು ಮಣ್ಣಿನ ಅಡಿಯಲ್ಲಿ ಮರದ ದಿಮ್ಮಿಗಳು ಸಿಗುತ್ತಿದ್ದು ಕಾರ್ಯಚರಣೆಯನ್ನು ಸೋಮವಾರಕ್ಕೆ ಮುಂದುವರಿಸಿದ್ದಾರೆ. ಆ ವ್ಯಕ್ತಿಯು ಕಳೆದ ಹಲವು ವರ್ಷಗಳಿಂದ ಅರಣ್ಯ ಲೂಟಿ ಮಾಡುತ್ತಿದ್ದು ಹೆಬ್ರಿ ಪರಿಸರದ ಬ್ರಹತ್ ತಂಡವೇ ಇದರ ಹಿಂದೆ ಇದೆ. ಎರಡು ವರ್ಷದ ಹಿಂದೆ ಇದೇ ವ್ಯಕ್ತಿಯ ಬಗ್ಗೆ ಹೆಬ್ರಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು 1.50 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.
ಹೆಬ್ರಿಯ ಯುವ ದಕ್ಷ ವಲಯ ಅರಣ್ಯಾಧಿಕಾರಿ ಮುನಿರಾಜ್ ಅವರ ಕಾನೂನು ಪಾಲನೆ ಮತ್ತು ಕಾರ್ಯಚರಣೆಗೆ ವ್ಯಾಪಕವಾಗಿದ ಶ್ಲಾಘನೆ ವ್ಯಕ್ತವಾಗುತ್ತಿದೆ.