ಸಚಿವ ಸಿ.ಟಿ.ರವಿಗೆ ಕೊರೊನ ಪಾಸಿಟಿವ್

ಚಿಕ್ಕಮಗಳೂರು: ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಕ್ರೀಡಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿಗೆ ಕೊರೊನ ಪಾಸಿಟಿವ್ ಇರುವುದು ಶನಿವಾರ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಮೂವರಲ್ಲಿ ಕೊರೊನಾ ಪಾಸಿಟಿವ್ ಇರುವುದನ್ನು ಪ್ರಯೋಗಾಲಯ ವರದಿ ದೃಢಪಡಿಸಿದೆ.

ಜಿಲ್ಲೆಯನ್ನು ಕೊರೋನ ಮಹಾಮಾರಿ ಬೆಂಬಿಡದೆ ಕಾಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರಿಗೆ ಕೊರೊನಾ ಸೋಂಕು ತಗಲಿರುವುದು ಜಿಲ್ಲೆಯ ಜನರಿಗೆ ಶಾಕ್ ನೀಡಿದೆ. ಜಿಲ್ಲೆಯಲ್ಲಿ ಶುಕ್ರವಾರ ಯಾರಲ್ಲೂ ಸೋಂಕು ಕಂಡು ಬಂದಿರಲಿಲ್ಲ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೀಗ ಕೆಲ ಬಿಜೆಪಿ ಮುಖಂಡರಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಶನಿವಾರ ವರದಿಯಾಗಿರುವ ಮೂರು ಪ್ರಕರಣಗಳಲ್ಲಿ ಎರಡು ಪ್ರಕರಣ ಚಿಕ್ಕಮಗಳೂರು ನಗರಕ್ಕೆ ಸೇರಿದ್ದು, ಒಂದು ಪ್ರಕರಣ ಕಡೂರುರಿಗೆ ಸೇರಿದ್ದಾಗಿದೆ.

Leave a Reply

Your email address will not be published. Required fields are marked *

error: Content is protected !!