ಶ0ಕರಪುರ: ಚರ್ಚ್ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
ಶಂಕರಪುರ ಫೆ.20(ಉಡುಪಿ ಟೈಮ್ಸ್ ವರದಿ): ಶಂಕರಪುರದ ಸೈಂಟ್ ಜೋನ್ಸ್ ಇವಾಂಜಲಿಸ್ಟ್ ಚರ್ಚ್, ವಿವಿಧ ಸೇವಾ ಸಮಿತಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಅಂಧತ್ವ ನಿಯಂತ್ರಣ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರವು ಶಂಕರಪುರದ ಸೈಂಟ್ ಜೋನ್ಸ್ ಇವಾಂಜಲಿಸ್ಟ್ಚರ್ಚ್ ನಲ್ಲಿ ನಡೆಯಿತು.
ಶಂಕರಪುರ ಚರ್ಚ್ ಹಿರಿಯ ಗುರುಗಳಾದ ವಂದನೀಯ ಅನಿಲ್ ಪ್ರಕಾಶ್ ಕಾಸ್ಟೆಲಿನೋ ಶಿಬಿರವನ್ನು ಉದ್ಘಾಟಿಸಿದರು, ಈ ಶಿಬಿರದಲ್ಲಿ 137 ಮ0ದಿಯ ನೇತ್ರತಪಾಸಣೆ ನಡೆಸಲಾಯಿತು. 13 ಮಂದಿಯನ್ನು ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಗಿದ್ದು, 27 ಜನರನ್ನು ಕನ್ನಡಕ ವಿತರಣೆಗೆ ಆಯ್ಕೆ ಮಾಡಲಾಯಿತು.
ಪ್ರಸಾದ್ ನೇತ್ರಾಲಯಕಣ್ಣಿನ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಹಾಯಕ ಗುರುಗಳಾದ ರೆ.ಫಾ. ಹೆನ್ರಿ ಡಿಸೊಜಾ, ಹಾಗೂ ರೆ.ಫಾ. ವಿಜಯ್ ಡಿಸೊಜಾ ಶುಭ ಹಾರೈಸಿದರು, ಚರ್ಚ್ ಸಮಿತಿಯ ಅಧ್ಯಕ್ಷ ಜೋನ್ ಮಾರ್ಟಿಸ್, ಕಾರ್ಯದರ್ಶಿ ಗಾಬ್ರಿಯಲ್ ಮಾರ್ಟಿಸ್, ಸ್ವಾಸ್ಥಆಯೋಗದ ಪ್ರೆಸಿಲ್ಲಾ ಕ್ವಾಡ್ರಸ್, ನೇತ್ರತಜ್ಞೆ ಡಾ. ಅನುಷಾ, ಕ್ಯಾಥೋಲಿಕ್ ಸಭಾದ ಗೀತಾ ಕ್ರಾಸ್ತಾ, ಸ0ಘಟನೆಯ ಸಿಸಿಲಿಯಾ ಮಾರ್ಟಿಸ್, ಐಸಿವೈಎಂ ಅಧ್ಯಕ್ಷಜೋನ್ ರೋಡ್ರಿಗಸ್, ಡಯನಾ ಮೆಂಡೋನ್ಸಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು.