ಶಿರ್ವ: ಬಾವಿಗೆ ಹಾರಿ ಆತ್ಮಹತ್ಯೆ
ಶಿರ್ವ: ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರ್ವದಲ್ಲಿ ನಡೆದಿದೆ. ಜೋನ್ ಡಿ ಸೋಜಾ (69) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಜ.12 ರಂದು ರಾತ್ರಿ ಮಲಗಿದ್ದ ಇವರು ಬೆಳಿಗ್ಗೆ ನೋಡಿದಾಗ ಇಲ್ಲದಿರುವುದನ್ನು ಗಮನಿಸಿದ ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಈ ವೇಳೆ ಮನೆಯಿಂದ ಸ್ವಲ್ಪ ದೂರದಲ್ಲಿ ಇದ್ದ ಸುಂದರ ಪೂಜಾರಿಯವರ ಮನೆಯ ಗದ್ದೆಯ ಬಳಿ ಇರುವ ಬಾವಿಯಲ್ಲಿ ಜೋನ್ ಡಿ ಸೋಜಾ ಅವರ ಮೃತದೇಹದ ಪತ್ತೆಯಾಗಿದೆ. ಇವರು ಯಾವುದೋ ಕಾರಣಕ್ಕೆ ಮನನೊಂದು ಜ.13 ರಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು, ಮಜೂರು ಪಂಚಾಯತ್ ಸದಸ್ಯ, ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ|ವಿಜಯ್ ಧೀರಜ್ ರವರ ತಂದೆಯಾಗಿದ್ದಾರೆ. ಮೃತರ ಅಂತಿಮ ಯಾತ್ರೆಯು ಇಂದು ( ಜ. 14) ಸಂಜೆ 4.30ಕ್ಕೆ ಮನೆಯಿಂದ ಹೊರಡಲಿದ್ದು, ಸಂಜೆ 5 ಗಂಟೆಗೆ ಪಾಂಬೂರಿನ ಹೋಲಿ ಕ್ರಾಸ್ ಚರ್ಚ್ ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.