ಶಿರ್ವ/ಗಂಗೊಳ್ಳಿ: ಮಟ್ಕಾ ಜುಗಾರಿ ಪ್ರಕರಣ- ಇಬ್ಬರು ವಶಕ್ಕೆ

ಉಡುಪಿ ಸೆ.7 (ಉಡುಪಿ ಟೈಮ್ಸ್ ವರದಿ): ಮಟ್ಕಾ ಜುಗಾರಿ ಪ್ರಕರಣಕ್ಕೆ ಸಂಬಂಧಿಸಿದ ಶಿರ್ವ ಹಾಗೂ ಗಂಗೊಳ್ಳಿ ಠಾಣೆಯಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸುಜೀತ್  ಪೂಜಾರಿ ಹಾಗೂ ಭಾಸ್ಕರ ಪೂಜಾರಿ ಪೊಲೀಸರು ವಶಕ್ಕೆ ಪಡೆದುಕೊಂಡವರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಶಿರ್ವ ಪೊಲೀಸರು ಠಾಣಾ ವ್ಯಾಪ್ತಿಯ ಕಾಪು ತಾಲೂಕಿನ ಪಿಲಾರು ಗ್ರಾಮದ ಮುದರಂಗಡಿಯ ಅಟೋರಿಕ್ಷಾ ನಿಲ್ದಾಣದ ಸಮೀಪ ಇರುವ ಸಾರ್ವಜನಿಕ ಸ್ಥಳದಲ್ಲಿ ಸುಜೀತ್ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದು ಆತನಿಂದ 1,350 ರೂ. ನಗದು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಗೂ ಗಂಗೊಳ್ಳಿ ಗ್ರಾಮದ ಮೇಲ್‍ ಗಂಗೊಳ್ಳಿ ವಾಟರ್ ಟ್ಯಾಂಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಂಗೊಳ್ಳಿ ಪೊಲೀಸರು ದಾಳಿ ನಡೆಸಿ ಭಾಸ್ಕರ ಪೂಜಾರಿ ಎಂಬತನನ್ನು ವಶಕ್ಕೆ ಪಡೆದು ಆತನಿಂದ 615 ರೂ ನಗದು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಎರಡು ಘಟನೆಗೆ ಸಂಬಂಧಿಸಿ ಶಿರ್ವ ಹಾಗೂ ಗಂಗೊಳ್ಳಿ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!