ಶಾಲಾ ಶಿಕ್ಷಕರ ನೇಮಕಾತಿ ಆಯ್ಕೆ ಪಟ್ಟಿ ಜುಲೈ ಅಂತ್ಯದೊಳಗೆ ಪ್ರಕಟ: ಶಿಕ್ಷಣ ಸಚಿವ ನಾಗೇಶ್

ಬೆಂಗಳೂರು, ಜು 03: ಜುಲೈ ಅಂತ್ಯದೊಳಗೆ 15,000 ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, 15 ಸಾವಿರ ಶಿಕ್ಷಕರ ಪರೀಕ್ಷೆಯ ಬಳಿಕ ಮೌಲ್ಯ ಮಾಪನ ಕಾರ್ಯ ನಡೆಯುತ್ತಿದ್ದು, ಎರಡು ಪತ್ರಿಕೆಯ ಮೌಲ್ಯಮಾಪನ ಮುಗಿದಿದ್ದು, ಜುಲೈ ಕೊನೆಯ ವಾರ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.ಇನ್ನು 15 ಸಾವಿರ ಶಿಕ್ಷಕರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೇ.21 ಮತ್ತು 22ರಂದು ನಡೆದಿದ್ದು, ಈ ಹುದ್ದಗಳಿಗೆ 10,6,083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!