ಮಲ್ಪೆ: ಸಿಎಂ,ಡಿಸಿಎಂಗೆ ಶುಭಕೋರಿ ಹಾಕಿದ್ದ ಬ್ಯಾನರ್ಗೆ ಹಾನಿ- ದೂರು
ಮಲ್ಪೆ ಜೂ.7(ಉಡುಪಿ ಟೈಮ್ಸ್ ವರದಿ): ಪಡುಕೆರೆ ಸೇತುವೆಯ ಬಳಿ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಶುಭ ಕೋರಿ ಹಾಕಲಾದ ಬ್ಯಾನರ್ನ್ನು ಕಿಡಿಗೇಡಿಗಳು ಹಾನಿಗೊಳಿಸಿರುವ ಘಟನೆ ನಡೆದಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಇವರಿಗೆ ಶುಭಕೋರಿ ಮಲ್ಪೆ ಪಡುಕೆರೆ ಸೇತುವೆಯ ಬಳಿ ಪಡುಕೆರೆ ಪರಿಸರದ ಕಾಂಗ್ರೆಸ್ ಕಾರ್ಯಕರ್ತರು ಮೇ.28 ರಂದು ಪ್ಲೇಕ್ಸ್ ನ್ನು ಹಾಕಿದ್ದರು. ಆದರೆ ಜೂ.4 ರಂದು ಬೆಳಿಗ್ಗೆ ನೋಡಿದಾಗ ಕಿಡಿಗೇಡಿಗಳು ಬ್ಯಾನರ್ನ್ನು ಹಾನಿಗೊಳಿಸಿರುವುದು ಕಂಡು ಬಂದಿದೆ ಎಂಬುದಾಗಿ ಮಲ್ಪೆಯಲ್ಲಿ ಸೈಬರ್ ಸೆಂಟರ್ ವ್ಯವಹಾರ ಮಾಡಿಕೊಂಡಿದ್ದ ಕಿದಿಯೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಸುದರ್ಶನ ಸುವರ್ಣ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.