ಮಣಿಪಾಲ: ಮಹಿಳೆಯ ಚಿನ್ನದ ಸರ ಸುಲಿಗೆ

ಮಣಿಪಾಲ: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪರಿಚಿತ ವ್ಯಕ್ತಿಯೊಬ್ಬ ಸುಲಿಗೆ ಮಾಡಿರುವ ಘಟನೆ ಸೆ.3ರಂದು ಬೆಳಗ್ಗೆ ಶಿವಳ್ಳಿ ಗ್ರಾಮದ ಸಗ್ರಿನೋಳೆ ತಿರುಮಲ ಕೋಳಿ ಫಾರಂ ಬಳಿ ನಡೆದಿದೆ.

ಸ್ಥಳೀಯ ನಿವಾಸಿ ಕಮಲ (70) ಎಂಬವರು ತನ್ನ ಅಣ್ಣನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಪೆರಂಪಳ್ಳಿ ಕಡೆಯಿಂದ ಓರ್ವ ವ್ಯಕ್ತಿ ಬಂದು ಕಮಲ ಅವರ ಕುತ್ತಿಗೆಗೆ ಕೈ ಹಾಕಿ 16 ಗ್ರಾಂ ತೂಕದ ಸುಮಾರು ಒಂದು ಲಕ್ಷ ಮೌಲ್ಯದ ಚಿನ್ನದ ಸರವನ್ನು ಎಳೆದು ಪರಾರಿಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!