ಮಣಿಪಾಲ: ಖಾಸಗಿ ಜಾಗದ ಕಂಪೌಂಡ್ ಕೆಡವಿ 3.2 ಲಕ್ಷ ನಷ್ಟ-ದೂರು ದಾಖಲು
ಮಣಿಪಾಲ ಜೂ.5 (ಉಡುಪಿ ಟೈಮ್ಸ್ ವರದಿ) : ಪೆರಂಪಳ್ಳಿ ಎಂಬಲ್ಲಿರುವ ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ ಸಂಸ್ಥೆಯ ಜಾಗದ ಆವರಣ ಗೋಡೆಯನ್ನು ಕೆಡವಿ ಹಾಕಿ ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಕಂಪೆನಿಯ ಮ್ಯಾನರ್ ನಿಶಾಂತ್ ವಿ.ಎನ್ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ನಿನ್ನೆ ರಾತ್ರಿ ಮಣಿಪಾಲ ಠಾಣಾ ವ್ಯಾಪ್ತಿಯ ಪೆರಂಪಳ್ಳಿ ಎಂಬಲ್ಲಿರುವ ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ ಸಂಸ್ಥೆಯ ಸ್ಥಳಕ್ಕೆ ಸುಮಾರು 50 ರಿಂದ 70 ಅಪರಿಚಿತ ಜನರು ಅಕ್ರಮ ಕೂಟ ಸೇರಿಕೊಂಡು JCB ವಾಹನದೊಂದಿಗೆ ಅಕ್ರಮ ಪ್ರವೇಶ ಮಾಡಿ, ಸಂಸ್ಥೆಗೆ ಸಂಬಂದಿಸಿದ ಜಾಗದ ಕಂಪೌಂಡ್ ಗೋಡೆಯನ್ನು ಕೆಡವಿ ಹಾಕಿ ಸುಮಾರು ರೂ 3.2 ಲಕ್ಷ ನಷ್ಟ ಉಂಟುಮಾಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.