ಬೈಂದೂರು: ಬೋಟ್’ನಿಂದ ಬಿದ್ದು ಮೀನುಗಾರ ಮೃತ್ಯು

ಬೈಂದೂರು ಮೇ.5(ಉಡುಪಿ ಟೈಮ್ಸ್ ವರದಿ): ಮೀನುಗಾರಿಕೆ ನಡೆಸುತ್ತಿದ್ದಾಗ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಕೊಡೇರಿ ಸಮುದ್ರದಲ್ಲಿ ನಡೆದಿದೆ.

ಕಿರಿಮಂಜೇಶ್ವರದ ಕೊಡೇರಿ ನಿವಾಸಿ ದಿನಕರ ಖಾರ್ವಿ (48) ಮೃತಪಟ್ಟವರು. ಇವರು ಮೇ.4 ರಂದು ಸಂಜೆ ಸುಮಾರು 6 ಗಂಟೆಗೆ ಕೊಡೇರಿ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗಿದ್ದರು. ರಾತ್ರಿ ದಿನಕರ ಖಾರ್ವಿ ಅವರ ಜೊತೆ ಹೋಗಿದ್ದ ಮಂಜುನಾಥ ಖಾರ್ವಿರವರು ದಿನಕರ ಖಾರ್ವಿ ಅವರ ತಮ್ಮ ವೆಂಕಟೇಶ ಅವರಿಗೆ ಕರೆ ಮಾಡಿ  ಮೀನುಗಾರಿಕೆ ಕೆಲಸ ಮಾಡುತ್ತಿದ್ದಾಗ ದಿನಕರ ಖಾರ್ವಿರವರು ಆಯತಪ್ಪಿ ಸಮುದ್ರಕ್ಕೆ ಬಿದ್ದಿರುವುದಾಗಿ ತಿಳಿಸಿದರು.‌‌

ಬಳಿಕ‌ ವೆಂಕಟೇಶ ಅವರು 4-5 ಜನರೊಂದಿಗೆ ದಿನಕರ ಖಾರ್ವಿರವರನ್ನು ಸಮುದ್ರದಿಂದ ಮೇಲಕ್ಕೆ ಎತ್ತಿ,‌ ಕೂಡಲೇ ಚಿಕಿತ್ಸೆಗಾಗಿ ಬೈಂದೂರು ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ದಿನಕರ ಖಾರ್ವಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.  ಈ ಬಗ್ಗೆ  ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!