ಲಿಖಿತ ರೂಪದಲ್ಲಿ ಪತ್ರ ಬರೆದು ಕೊಡವವರೆಗೂ ಮುಷ್ಕರ ಮುಂದುರೆಯಲಿದೆ: ಕೋಡಿಹಳ್ಳಿ
ಬೆಂಗಳೂರು: ಸಾರಿಗೆ ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆಯಲಾಗುವುದು ಎಂದ ಕೋಡಿಹಳ್ಳಿ ಚಂದ್ರಶೇಖರ್ ಇಂದು ಯೂ ಟರ್ನ್ ಹೊಡೆದಿದ್ದಾರೆ.
ಈಗಾಗಲೆ ಸಾರಿಗೆ ನೌಕರರ 10 ಬೇಡಿಕೆಗಳ ಪೈಕಿ9 ಬೇಡಿಕೆಯ ಈಡೆರಿಕೆಗೆ ಸರಕಾರ ಬದ್ಧವಿರುವುದಾಗಿ ತಿಳಿಸಿತ್ತು. ಅದರಂತೆ ಇಂದು ಮುಷ್ಕರ ವಾಪಾಸ್ಸು ಪಡೆಯುವುದಾಗಿ ಚಂದ್ರಶೇಖರ್ ತಿಳಿಸಿದ್ದರು.
ಆದ್ರೆ ಇಂದು ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ಕುರಿತಂತೆ ಪ್ರಕ್ರಿಯಿಸಿರುವ ಅವರು, ಮುಷ್ಕರವನ್ನು ವಾಪಾಸ್ಸು ಪಡೆಯಲು ಸಿದ್ದರಿದ್ದೇವೆ ಆದರೆ ಸರಕಾರದ ಬೇಡಿಕೆ ಈಡೇರಿಕೆಗೆ ಸಂಬಂದಿಸಿ ನೀಡಿರುವ ಭರವಸೆಯ ಕುರಿತು ಲಿಖಿತ ರೂಪದಲ್ಲಿ ಪತ್ರ ಬರೆದು ಕೊಡಬೇಕು. ಈ ಕುರಿತಂತೆ ಲಿಖಿತ ರೂಪದಲ್ಲಿ ಪತ್ರ ಬರೆದು ಕೊಡುವವರೆಗೂ ಮುಷ್ಕರ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.