| ಉಡುಪಿ ಜ.2: ಜೀವದ ಹಂಗು ತೊರೆದು ಯುವಕನೋರ್ವ ರೈಲು ಅಪಘಾತದಿಂದ ತಾಯಿ ಮತ್ತು ಮಗುವನ್ನು ರಕ್ಷಿಸಿದ ಘಟನೆ ಬಾರ್ಕೂರು ರೈಲು ನಿಲ್ದಾಣದಲ್ಲಿ ನಡೆದಿದೆ.
ಬಾರ್ಕೂರಿನ ಕಚ್ಚೂರಿನವರಾದ ಲಿಸ್ಟನ್ ಫೆರ್ನಾಂಡಿಸ್ ಜೀವ ಪಣಕ್ಕಿಟ್ಟು ತಾಯಿ ಮತ್ತು ಮಗುವನ್ನು ರಕ್ಷಿಸಿದ ಯುವಕ. ತಾಯಿ ಮತ್ತು ಮಗು ಪ್ರಯಾಣಿಸುತ್ತಿದ ರೈಲಿನಲ್ಲಿ ಮಗು ಬಾರ್ಕೂರು ಪ್ಲಾಟ್ ಫಾರ್ಮ್ ದಾಟಿದ 250 ಮೀ ದೂರು ತಲುಪುತಿದ್ದಂತೆ ರೈಲಿನಿಂದ ಕೆಳಗೆ ಬಿದ್ದಿದ್ದು ಇದನ್ನು ಕಂಡ ತಾಯಿ ಕೂಡ ರೈಲಿನಿಂದ ಹಾರಿದ್ದಾರೆ. ಇದನ್ನು ಗಮನಿಸಿದ ಲಿಸ್ಟನ್ ಫೆರ್ನಾಂಡಿಸ್ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಇನ್ನೇನು ರೈಲು ತಾಯಿ ಮತ್ತು ಮಗುವಿನ ಮೇಲೆ ಹರಿದು ಹೋಗುತ್ತದೆ ಎನ್ನುವಷ್ಟರಲ್ಲಿ ಇಬ್ಬರನ್ನೂ ಕ್ಷಣಾರ್ಧದಲ್ಲಿ ಅವರ ಬಳಿ ಧಾವಿಸಿ ರಕ್ಷಿಸಿದ್ದಾರೆ.
ಈ ಎಲ್ಲಾ ಸಂಗತಿಗಳು ಕೆಲವೇ ಸೆಕೆಂಡುಗಳಲ್ಲಿ ಸಂಭವಿಸಿದ್ದು, ಇದೀಗ ಲಿಸ್ಟನ್ ಅವರ ಸಮಯ ಪ್ರಜ್ಞೆಯಿಂದ ಸOಭವ್ಯ ಅನಾಹುತವೊಂದು ತಪ್ಪಿದಂತಾಗಿದೆ. ಇದೀಗ ಜೀವವನ್ನು ಪಣಕ್ಕಿಟ್ಟು ಅಪರಿಚಿತ ತಾಯಿ ಮತ್ತು ಮಗನ ಜೀವವನ್ನು ಉಳಿಸಿದ ಲಿಸ್ಟನ್ ಅವರ ಕಾರ್ಯ ಹಾಗೂ ಧೈರ್ಯ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬಾರ್ಕೂರಿನ ಕಚ್ಚೂರಿನವರಾದ ಲಿಸ್ಟನ್ ಫೆರ್ನಾಂಡಿಸ್ ಅವರು ತಮ್ಮ ಸಹೋದರಿಯನ್ನು ಗೋವಾ ಕಡೆಗೆ ಹೋಗುವ ರೈಲಿಗೆ ಬಿಡಲು ರೈಲಿಗಾಗಿ ಕಾಯುತ್ತಿದ್ದರು ಎಂದು ತಿಳಿದು ಬಂದಿದೆ. | |