ಬಲೂನ್ ಗಂಟಲಿಗೆ ಸಿಲುಕಿ ಬಾಲಕ ಸಾವು
ನಾಗ್ಪುರ, ನ.3 : ಮಹಾರಾಷ್ಟ್ರದ ನಾಗ್ಪುರದಲ್ಲಿ ಗಾಳಿ ತುಂಬುತ್ತಿದ್ದ ಬಲೂನ್ ಗಂಟಲಿಗೆ ಸಿಲುಕಿ 6 ವರ್ಷದ ಬಾಲಕನೊರ್ವ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ನಂದನವನ ಪ್ರದೇಶದ ಸ್ವರಾಜ್ ವಿಹಾರ್ ಕಾಲೋನಿಯಲ್ಲಿ ನ.1 ರಂದು ಈ ಘಟನೆ ನಡೆದಿದೆ. ಬಲೂನ್ ಅನ್ನು ಗಾಳಿ ತುಂಬಿಸಿ ಹಿಗ್ಗಿಸುವಾಗ ಬಾಲಕನ ಗಂಟಲಿಗೆ ಸಿಲುಕಿದೆ. ಪರಿಣಾಮ ಉಸಿರುಗಟ್ಟುವಿಕೆಗೆ ಕಾರಣವಾಯಿತು. ತಕ್ಷಣ ಮನೆಯವರು ಬಲೂನ್ ತೆಗೆಯಲು ಯತ್ನಿಸಿದರಾದರೂ ಸಾಧ್ಯವಾಗಿರಲಿಲ್ಲ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯದದಲ್ಲಿ ಮಗು ಸಾವನ್ನಪ್ಪಿದೆ.
ಘಟನೆ ಕುರಿತಾಗಿ ಮಾಹಿತಿ ನೀಡಿದ ನಂದನ್ವನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಪ್ರಕರಣವನ್ನ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.