ವಾರಾಂತ್ಯ ಕರ್ಫ್ಯೂ’ನಲ್ಲಿ ನಕಲಿ ಪಾಸ್ ಬಳಸಿ ಯುವಕ ಹಾಗೂ ಅಪ್ರಾಪ್ತ ವಿದ್ಯಾರ್ಥಿನಿ ಲಾಡ್ಜ್ ನಲ್ಲಿ ಪತ್ತೆ
ದ.ಕ ಜೂ.28: ವಾರಾಂತ್ಯ ಕರ್ಫ್ಯೂನ ಅವಧಿಯಲ್ಲಿ ಸರಕಾರದ ನಿಯಮ ಮೀರಿದ್ದಲ್ಲದೆ, ನಕಲಿ ಪಾಸ್ ಬಳಸಿ ಯುವಕ ಹಾಗೂ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ಮಂಗಳೂರಿನ ಲಾಡ್ಜ್ ವೊಂದರಲ್ಲಿ ಪ್ರತ್ಯೇಕ ರೂಮ್ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಯುವಕ ಕುದ್ರೋಳಿ ನಿವಾಸಿಯಾಗಿದ್ದಾನೆ. ಹಾಗೂ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ತರೀಕೆರೆಯವಳಾಗಿದ್ದು, ನಗರದ ಕಾಲೇಜಿನಲ್ಲಿ ಓದುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ವಸತಿಗೃಹವೊಂದರಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಇವರು ರೂಮ್ ಮಾಡಿಕೊಂಡಿ ರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಇಬ್ಬರು ಪ್ರತ್ಯೇಕ ರೂಮ್ ನಲ್ಲಿದ್ದರೆಂದು ತಿಳಿದು ಬಂದಿದೆ. ಇದೀಗ ಇವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ಇವರು ತಾವು ತೆರಳುವ ಕಾರಿಗೆ ನಕಲಿ ಪಾಸ್ ಅಂಟಿಸಿ ಲಾಡ್ಜ್‌ಗೆ ತೆರಳಿದ್ದರೆಂದು ತಿಳಿದುಬಂದಿದೆ. ಆದ್ದರಿಂದ ನಕಲಿ ಪಾಸ್ ಬಳಕೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.