ದಿವ್ಯತ್ಮದ ಅಗಲಿಕೆಗೆ ಪ್ರಧಾನಿ ಸೇರಿದಂತೆ ಗಣ್ಯರಿಂದ ಸಂತಾಪ
ಪೇಜಾವರ ಮಠದ ಹಿರಿಯ ಯತಿಶ್ರೀ ವಿಶ್ವೇಶರತೀರ್ಥ ಸ್ವಾಮೀಜಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ನಾಯಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಪೇಜಾವರ ಶ್ರೀಗಳು ಮಾರ್ಗದರ್ಶಿ ಬೆಳಕಾಗಿ ಲಕ್ಷಾಂತರ ಜನರ ಮನದಲ್ಲಿ ಹಾಗೂ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಓಂ ಶಾಂತಿ ಎಂದು ಹೇಳುವ ಮೂಲಕ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.
ಪ್ರಮೋದ್ ಮಧ್ವರಾಜ್ ಸಂತಾಪ – ಪೇಜಾವರ ನಿದಾನಕ್ಕೆ ಮಾಜಿ ಸಚಿವ ಪ್ರಮೋದ್ಪ ಮಧ್ವರಾಜ್ ಸಂತಾಪ ಸೂಚಿಸಿದ್ದಾರೆ . ಪೇಜಾವರ ಮಠಾಧೀಶ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ದೇವರ ದಿವ್ಯಪಾದ ಸೇರಿರುವ ವಿಚಾರವನ್ನು ಅರಗಿಸಿಕೊಳ್ಳುವುದು ತೀರಾ ಕಷ್ಟವಾಗುತ್ತಿದೆ…
ನನ್ನ ತಂದೆಯ ಕಾಲದಿಂದಲೂ ಪೇಜಾವರ ಸ್ವಾಮಿಯರು ನಮ್ಮ ಕುಟುಂಬಕ್ಕೆ ಮಾರ್ಗದರ್ಶಕರಾಗಿದ್ದರು, ಉಡುಪಿಯ ಅಭಿವೃದ್ದಿಗೆ ನಾನು ಕಂಡ ಕನಸನ್ನು ನನಸು ಮಾಡಲು ಸದಾ ಸಲಹೆ ಸೂಚನೆ ನೀಡುತ್ತಾ ಮಾರ್ಗದರ್ಶನ ಮಾಡಿ ಸದಾ ಆಶಿರ್ವಾದ ಮಾಡಿದ ಶ್ರೀಗಳು ಕೃಷ್ಣಕ್ಯರಾಗಿರುವುದು ನನಗೆ ತೀವ್ರ ಬೇಸರವನ್ನುಂಟುಮಾಡಿದೆ…
ನಡೆದಾಡುವ ದೇವರೆಂದು ಕರೆಯಲ್ಪಡುವ ದಣಿವರಿಯದ ಶ್ರಮಿಕ ಸಾತ್ವಿಕ ಶ್ರೀಗಳ ದಿವ್ಯಾತ್ಮಕ್ಕೆ ಸಧ್ಘತಿ ಪ್ರಾಪ್ತಿಯಾಗಲಿ ಎಂದು ಶ್ರೀದೇವರಲ್ಲಿ ಪ್ರಾರ್ಥಿಸುತ್ತೇನೆ.
ಎಂಬುದಾಗಿ ಪ್ರಮೋದ್ ವಿಷಾದ ವ್ಯಕ್ತಪಡಿಸಿದರು