ಚುನಾವಣಾ ಆಯೋಗದ ಹದ್ದಿನ ಕಣ್ಣು- 10 ದಿನದಲ್ಲಿ 100 ಕೋಟಿ ನಗದು- ವಸ್ತುಗಳು ವಶಕ್ಕೆ

ಬೆಂಗಳೂರು ಎ.10: ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ನಗದು ವಹಿವಾಟುಗಳ ಮೇಲೆ ಚುನಾವಣಾ ಆಯೋಗ ನಿಗಾ ಇರಿಸಿದ್ದು ಚೆಕ್​ಪೋಸ್ಟ್​​ಗಳನ್ನು ನಿರ್ಮಿಸಿದ್ದು, ಕಳೆದ 10 ದಿನಗಳಲ್ಲಿ ಚುನಾವಣಾ ಆಯೋಗ ಬರೊಬ್ಬರಿ 100 ಕೋಟಿಯಷ್ಟು ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದೆ.

ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಕೇವಲ 10 ದಿನಗಳಲ್ಲಿ 36.8 ಕೋಟಿ ರೂ. ಹಣ, 15.46 ಕೋಟಿ ರೂ. ಬೆಲೆಯ ಉಚಿತ ವಸ್ತುಗಳು, 30 ಕೋಟಿ ರೂ. ಬೆಲೆಯ 5.2 ಲಕ್ಷ ಲೀಟರ್​ ಮದ್ಯ, 15 ಕೋಟಿ ರೂ. ಬೆಲೆಯ ಬಂಗಾರ ಮತ್ತು 2.5 ಕೋಟಿ ರೂ. ಬೆಲೆಯ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ವರದಿಯೊಂದರ ಪ್ರಕಾರ ಮಾರ್ಚ್​​ 29 ರಂದು ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಅಂದಿನಿಂದ ಇಲ್ಲಿಯವರೆಗು ಒಟ್ಟು 99.18 ಕೋಟಿಯಷ್ಟು ಹಣ ಮತ್ತು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ರವಿವಾರ (ಏ.09) ಯಾದಗಿರಿ ಜಿಲ್ಲೆಯಲ್ಲಿ 34 ಲಕ್ಷ ರೂ. ಹಣ, 21 ಲಕ್ಷ ರೂ. ಮೌಲ್ಯದ 56 ಟಿವಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕ್ಷೇತ್ರದಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ತಂಡ ವಶಪಡಿಸಿ ಕೊಂಡಿದೆ. ಹೀಗೆ ಅಬಕಾರಿ ಇಲಾಖೆಯ ಅಧಿಕಾರಿಗಳು 1.62 ಕೋಟಿ ರೂ ಮೌಲ್ಯದ 54,282 ಲೀಟರ್​​ನಷ್ಟು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು, ಚುನಾವಣಾ ಆಯೋಗವು ಪಾರದರ್ಶಕತೆಗೆ ಒತ್ತು ನೀಡುತ್ತಿದ್ದು, ಸೂಕ್ತ ದಾಖಲೆಗಳಿಲ್ಲದ ನಗದು ಮತ್ತು ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಹಂಚಲು ರವಾನಿಸಲಾಗುತ್ತಿದ್ದ ವಸ್ತುಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!