ಕುಂದಾಪುರ: ಘನತ್ಯಾಜ್ಯ ವಿಲೇವಾರಿ ವಾಹನದ ಬ್ಯಾಟರಿ ಕಳವು
ಕುಂದಾಪುರ ಜೂ.15 (ಉಡುಪಿ ಟೈಮ್ಸ್ ವರದಿ): ಪುರಸಭೆಗೆ ಸಂಬಂಧಪಟ್ಟ ಘನತ್ಯಾಜ್ಯ ವಿಲೇವಾರಿ ಮಾಡುವ ಸರಕಾರಿ ವಾಹನದ ಬ್ಯಾಟರಿ ಕಳವಾಗಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪುರ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಮಾಡುವ ಟ್ರ್ಯಾಕ್ಟರ್‌ನ್ನು ಅದರ ಚಾಲಕ ಪ್ರಭಾಕರ ಎಂಬವರು ಕೆಲಸ ಮುಗಿಸಿದ ನಂತರ ವಡೇರಹೋಬಳಿ ಗ್ರಾಮದ ಗಾಂಧೀಪಾರ್ಕಿನಲ್ಲಿ ಇಟ್ಟು ಹೋಗಿದ್ದರು. ಆದರೆ ಜೂ.14 ರಂದು ಸ್ಥಳಕ್ಕೆ ಬಂದು ನೋಡಿದಾಗ ವಾಹನದ ಬ್ಯಾಟರಿ ಕಾಣದೇ ಇದ್ದು, ಅದರಂತೆ ಕಳ್ಳರು ನಿಲ್ಲಿಸಿದ್ದ ಟ್ರ್ಯಾಕ್ಟರ್‌ನ ಬ್ಯಾಟರಿ ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.