ಕುಂದಾಪುರ: ಆರ್’ಟಿಐ ಕಾರ್ಯಕರ್ತಗೆ ತಂಡದಿಂದ ಹಲ್ಲೆ

ಕುಂದಾಪುರ ಮಾ.26(ಉಡುಪಿ ಟೈಮ್ಸ್ ವರದಿ): ಆರ್.ಟಿ.ಐ ಕಾರ್ಯಕರ್ತ ಕುಂದಾಪುರದ ಸದಾಶಿವ ಕೋಟೆಗಾರ್ ಅವರಿಗೆಅಪರಿಚಿತರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಮಾ.25 ರಂದು ಸದಾಶಿವ ಕೋಟೆಗಾರ್ ಅವರು ಕುಂದಾಪುರದ ನವೀನ್ ಡ್ರೈವ್ ಇನ್ ಬಾರಿನ ಬಳಿಯ ಓಣಿಯಲ್ಲಿ ನಿಂತಿದ್ದ ವೇಳೆ  ನಾಲ್ಕು ಜನ ಅಪರಿಚಿತರು ಇವರ ಬಳಿ ಬಂದು ಹಲ್ಲೆ ಮಾಡಿದ್ದಾರೆ ಮಾತ್ರವಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ.

ಆರ್.ಟಿ.ಐ ಕಾರ್ಯಕರ್ತರಾಗಿರುವ ಸದಾಶಿವ ಕೋಟೆಗಾರ್ ಅವರು ಹಲವಾರು ದೂರನ್ನು ದಾಖಲಿಸಿದ್ದು ಇದರಿಂದಾಗಿ ಕೋಪಗೊಂಡಿರುವ ಆರೋಪಿಗಳು ಕೃತ್ಯವನ್ನು ನಡೆಸಿರಬಹುದು ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸದಾಶಿವ ಕೋಟೆಗಾರ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!