ಕುಂದಾಪುರ: ಅವಿವಾಹಿತ ರಿಕ್ಷಾ ಚಾಲಕ ಮೃತ್ಯು
ಕುಂದಾಪುರ ಸೆ.14(ಉಡುಪಿ ಟೈಮ್ಸ್ ವರದಿ): ವಿಪರೀತ ಮದ್ಯಪಾನದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಟೋ ರಿಕ್ಷಾ ಚಾಲಕನಾಗಿದ್ದ ರಾಘವೇಂದ್ರ (40) ಮೃತಪಟ್ಟವರು.ಇವರು ಅವಿವಾಹಿತರಾಗಿದ್ದು ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂಡಿದ್ದರು. ಸೆ.12 ರಂದು ರಾತ್ರಿ ಎಂದಿನಂತೆ ಮನೆಯ ಎದುರಿನ ಗಿರಿಜಾ ಪೂಜಾರ್ತಿ ಅವರ ಮನೆಯ ಜಗುಲಿ ಕಟ್ಟೆ ಮೇಲೆ ಮದ್ಯಪಾನ ಮಾಡಿ ಮಲಗಿಕೊಂಡಿದ್ದು, ನಿನ್ನೆ ಮಧ್ಯಾಹ್ನ 2.30 ಆದರೂ ಏಳದಿರುವುದರಿಂದ ಗಿರಿಜಾ ಪೂಜಾರ್ತಿಯವರು ರಾಘವೇಂದ್ರ ಅವರ ತಂದೆ ಗೌತಮ್ ಅವರಿಗೆ ತಿಳಿಸಿದ್ದರು, ಬಳಿಕ ಅವರು ಒಂದು ಪರೀಕ್ಷಿಸಿದಾಗ ರಾಘವೇಂದ್ರ ಮೃತಪಟ್ಟಿರುವುದು ತಿಳಿದು ಬಂದಿದೆ.
ಈ ಬಗ್ಗೆ ಗೌತಮ್ ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.