ಕುಂದಾಪುರ: ಅಕ್ರಮ ಪ್ರವೇಶಗೈದು ಹಲ್ಲೆ ನಡೆಸಿ ಜೀವ ಬೆದರಿಕೆ
ಕುಂದಾಪುರ ಜ.14 (ಉಡುಪಿ ಟೈಮ್ಸ್ ವರದಿ): ಕಸಬಾ ಗ್ರಾಮದ ಕೋಣಿ ಲಿಂಗಿಮನೆ ಎಂಬಲ್ಲಿ ಒಬ್ಬರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಕುಂದಾಪುರದ ಕಸಬಾ ಗ್ರಾಮದ ಜಲಜ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಜಲಜ ಅವರಿಗೆ ಮಕ್ಕಳಿಲ್ಲದ ಕಾರಣರವರ ಅಕ್ಕನ ಮಗಳಾದ ರಜನಿಯವರು ಇವರನ್ನು ನೋಡಿಕೊಳ್ಳುತ್ತಿದ್ದರು. ಜ.13 ರಂದು ಬೆಳಿಗ್ಗೆ 8:00 ಗಂಟೆಯ ಸುಮಾರಿಗೆ ಕುಂದಾಪುರದ ಕಸಬಾ ಗ್ರಾಮದ ಕೋಣಿ ಲಿಂಗಿಮನೆ ಎಂಬಲ್ಲಿರುವ ರಜನಿ ಅವರ ಜಾಗದಲ್ಲಿ ತೆಂಗಿನಕಾಯಿಯನ್ನು ರಾಶಿ ಹಾಕುತ್ತಿರುವಾಗ ನೆರೆ ಮನೆಯವರಾದ ಪದ್ಮಾವತಿ, ರಾಜೀವಿ, ಅಭಿಷೇಕ್ ಎಂಬುವವರು ರಜನಿ ಅವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಈ ಜಾಗ ನಮಗೆ ಸೇರಬೇಕಾಗಿದ್ದು, ನೀನು ಯಾರು ಕಾಯಿ ಕೊಯ್ಯಿಸುವವಳು ಎಂದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ. ಅಲ್ಲದೆ ಅವರೆಲ್ಲರೂ ಸೇರಿ ಈ ಜಾಗಕ್ಕೆ ತೆಂಗಿನ ಕಾಯಿಕೊಯ್ಯಲು ಬಂದರೆ ಕೊಲೆ ಮಾಡುವುದಾಗಿ ಜೀವ ಬೇದರಿಕೆ ಹಾಕಿ ಅಲ್ಲಿಂದ ಓಡಿ ಹೋಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.