ಕಾರ್ಕಳ: ಬಸ್-ಬೈಕ್ ಅಪಘಾತ ಓರ್ವ ಮೃತ್ಯು- ಇನ್ನೋರ್ವ ಗಂಭೀರ
ಕಾರ್ಕಳ : ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೈಲೂರಿನಲ್ಲಿ ಸಂಭವಿಸಿದೆ.
ಯರ್ಲಪಾಡಿ – ಗೋವಿಂದೂರು ಕಡೆಯಿಂದ ಬರುತ್ತಿದ್ದ ಬಸ್ಗೆ ಬೈಲೂರು ಹೈಸ್ಕೂಲ್ ಸಾಗುವ ತಿರುವಿನಲ್ಲಿ ಕಾರ್ಕಳದೆಡೆಗೆ ಸಾಗುವ ಬೈಕ್ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಸವಾರ ಮೃತಪಟ್ಟಿದ್ದಾರೆ. ನಾಗರಾಜ್ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಸಹ ಸವಾರ ಮಂಜು ಅವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇವರು ಪಳ್ಳಿಯ ಕೋಕಾಯಿಕಲ್ ಮದ್ಮಲ್ ಪಾದೆಯಲ್ಲಿ ವಾಸ್ತವ್ಯ ಹೊಂದಿದ್ದ ತಮಿಳುನಾಡು ಮೂಲದವರು ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.