ಕಾರ್ಕಳ: ಅಗ್ನಿಶಾಮಕ ದಳದ ಸುರೇಶ್ ಕುಮಾರ್ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ
ಕಾರ್ಕಳ : ನಗರದ ಅಗ್ನಿಶಾಮಕ ದಳದ ಸಿಬ್ಬಂದಿ ಸುರೇಶ್ ಕುಮಾರ್ ಅವರು ಈ ಬಾರಿಯ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ಅಗ್ನಿಶಮನ ಕಾರ್ಯ, ರಕ್ಷಣಾ ಕಾರ್ಯ ಮತ್ತು ವಿಪತ್ತು ಸಂದರ್ಭಗಳಲ್ಲಿ ಇವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಸುರೇಶ್ ಕುಮಾರ್ ಅವರನ್ನು ಇಲಾಖೆಯು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸದ್ಯ ಮಂಗಳೂರು ಕೆಪಿಟಿ ಬಳಿಯ ನಿವಾಸಿಯಾಗಿರುವ ಸುರೇಶ್ ಕುಮಾರ್ ಅವರು 1997 ರಲ್ಲಿ ಮೈಸೂರಿನ ಸರಸ್ವತಿಪುರದ ಅಗ್ನಿಶಾಮಕ ದಳಕ್ಕೆ ಕರ್ತವ್ಯಕ್ಕೆ ಸೇರುವ ಮೂಲಕ ತಮ್ಮ ಸೇವೆಯನ್ನು ಪ್ರಾರಂಭಿಸಿದ್ದರು. ಬಳಿಕ 2012 ರಲ್ಲಿ ಕಾರ್ಕಳ ಅಗ್ನಿಶಾಮಕ ಠಾಣೆಗೆ ವರ್ಗಾವಣೆ ಹೊಂದಿದ ಇವರು 24 ವರ್ಷಗಳ ಸೇವಾವಧಿಯಲ್ಲಿ ಸುಮಾರು ಇಲಾಖಾ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಯಾಗಿರುವ ಸುರೇಶ್ ಕುಮಾರ್ ಅವರಿಗೆ ಎಪ್ರಿಲ್ 14 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.