ಕಾಪು: 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆ ಮುಂಬೈನಲ್ಲಿ ಅರೆಸ್ಟ್
ಉಡುಪಿ: ಆಸ್ತಿ ವಿವಾದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕಳೆದ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅನುರಾಧಾ ಕರ್ಕೇರ ಅವರನ್ನು ಕಾಪು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.
2012ರಲ್ಲಿ ಮೂಳೂರಿನಲ್ಲಿ ಸಂಬಂಧಿಕರ ನಡುವೆ ಆಸ್ತಿ ವಿವಾದ ಉಂಟಾಗಿತ್ತು. ಅನುರಾಧ ಅವರ ಸಹೋದರಿ ನೀತಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅನುರಾಧಾ 2017 ರವರೆಗೆ ನಿಯಮಿತವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು, ನಂತರ ಅವರು ತಲೆಮರೆಸಿಕೊಂಡಿದ್ದರು.ಉಡುಪಿಯ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆದೇಶದ ಮೇರೆಗೆ ಕಾಪು ಎಎಸ್‌ಐ ರವೀಶ್ ಹೊಳ್ಳ ಅವರು ಹೆಡ್ ಕಾನ್‌ಸ್ಟೆಬಲ್‌ಗಳಾದ ಮೊಹಮ್ಮದ್ ರಫೀಕ್ ಮತ್ತು ಸುಲೋಚನಾ ಅವರೊಂದಿಗೆ ಆಗಸ್ಟ್ 18 ರಂದು ಮುಂಬೈನಲ್ಲಿ ಸಿಯಾನ್‌ನಲ್ಲಿ ಅನುರಾಧಾಳನ್ನು ಬಂಧಿಸಿದ್ದಾರೆ. ಅನುರಾಧ ಅವರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ 15 ಸಾವಿರ ರೂ. ದಂಡ ವಿಧಿಸಿದೆ. ಆಗಸ್ಟ್ 21ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಿದೆ.