ಕಾನೂನು ಮೀರಿ ನಡೆಸುವ ಪಬ್, ಡ್ಯಾನ್ಸ್ ಬಾರ್ ಕಡಿವಾಣಕ್ಕೆ ವಿಶ್ವ ಹಿಂದೂ ಪರಿಷತ್ ಆಗ್ರಹ

ಮಂಗಳೂರು: ನಗರದಾದ್ಯಂತ ಪಬ್ ಡ್ಯಾನ್ಸ್ ಬಾರ್ ಗಳಲ್ಲಿ ಕಾನೂನು ಮೀರಿ ಚಟುವಟಿಕೆಗಳು ನಡೆಯುತ್ತಿದೆ. ಪಾರ್ಟಿಯ ಹೆಸರಿನಲ್ಲಿ ಡ್ರಗ್ಸ್, ಗಾಂಜಾ, ಅಮಲು ಪದಾರ್ಥಗಳ ಸೇವನೆಯೊಂದಿಗೆ ಪಬ್ ಬಾರ್ ಗಳು ಅನೈತಿಕ ಕೇಂದ್ರವಾಗುತ್ತಿದೆ.

ಈ ಚಟುವಟಿಕೆಯಿಂದ ಹದಿಹರೆಯದ ಯುವಕ ಯುವತಿಯರು ಬಲಿಯಾಗುತ್ತಿದ್ದು ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ.ಪಾರ್ಟಿಯ ಹೆಸರಿನಲ್ಲಿ ತಡರಾತ್ರಿ ತನಕ ಪಬ್ ಗಳನ್ನು ತೆರೆದು ಮೋಜು ಮಸ್ತಿ ನಡೆಸುತ್ತಿದ್ದಾರೆ. ಆದ್ದರಿಂದ ತಕ್ಷಣ ಪೊಲೀಸ್ ಇಲಾಖೆ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುವ ಎಲ್ಲಾ ಪಬ್ ಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಗ್ರಹಿಸಿದೆ.

Leave a Reply

Your email address will not be published. Required fields are marked *

error: Content is protected !!