ಉಡುಪಿ: 103 ಜನರಲ್ಲಿ ಕೊರೋನಾ ಸೋಂಕು ದೃಢ ,5 ಸಾವು


ಉಡುಪಿ(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಇಂದು (ಆ 24 ) ರಂದು 103 ಜನಕ್ಕೆ ಕೊರೋನಾ ಸೋಂಕು ದೃಢವಾಗಿದ್ದು, 684 ಜನರಲ್ಲಿ ನೆಗೆಟಿವ್ ಬಂದಿದೆ. ಹಾಗು 5 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ 89 ಕ್ಕೆ ಏರಿದೆ.
ಜಿಲ್ಲೆಯಲ್ಲಿ 10229 ಒಟ್ಟು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು 156 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 7557 ಜನ ಗುಣಮುಖರಾಗಿದ್ದಾರೆ. 2590 ಸಕ್ರಿಯ ಪ್ರಕರಣಗಳಿವೆ. ಮರಣ ಹೊಂದಿದವರಲ್ಲಿ ಮೂರು ಮಂದಿ ಕಾರ್ಕಳದವರಾಗಿದ್ದು ಇಬ್ಬರು ಉಡುಪಿಯವರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!