ವಲಯದ xv ಆತಿಥ್ಯದಲ್ಲಿ : ನಾಯಕ – 2019

ಸಂಪೂರ್ಣ ಕನ್ನಡದಲ್ಲಿ ಆಗುತ್ತಿರುವ ಬಹುಬೇಡಿಕೆಯ ತರಬೇತಿ ಕಾರ್ಯಾಗಾರ ನಾಯಕ -2019 ಈ ಬಾರಿ ವಲಯದ xv ಆತಿಥ್ಯದಲ್ಲಿ ಮಲ್ಪೆಯ ಕಡಲ ಕಿನಾರೆಯ ಹೋಟೆಲ್ ಪ್ಯಾರಡೈಸ್ ನಲ್ಲಿ ಜೂಲೈ 19 ರಿಂದ 21 ರವರೆಗೆ ನಡೆಯಲಿದೆ.

ವಲಯ xiv,xv, ಹಾಗು xxiv ವಲಯಗಳ ಜೆಸಿಗಳಿಗೆ ಈ ಕಾರ್ಯಾಗಾರದಲ್ಲಿ ಅವಕಾಶವಿದ್ದು , ಜೆಸಿಯೇತರರು ಕೂಡ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು, ಮುಖ್ಯ ತರಬೇತುದಾರರಾಗಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಸೆನೆಟರ್ ಸದಾನಂದ ನಾವಡರವರು ಹಾಗು ಸಹತರಬೇತುದಾರರಾಗಿ ಜೆಸಿ ಉಮೇಶ್ ಬಸವರಾಜ್ , ಜೆಸಿ ಚಂದ್ರಮಪ್ಪ , ಜೆಸಿ ಸತೀಶ್ ಬಿಳಿನೆಲೆ ಕಾರ್ಯಾಗಾರ ನಡೆಸಿಕೊಡಲಿದ್ದಾರೆ

ನಾಯಕತ್ವ ಎಂದರೇನು ? , ನಾಯಕ ಎಂದರೆ ಯಾರು ? ಎಂಬುದೆಲ್ಲ ತಿಳಿಸಿ ಕೊಡುವ ಸಂಪೂರ್ಣ ಕನ್ನಡ ತರಬೇತಿ ಕಾರ್ಯಾಗಾರವೇ ನಾಯಕ … ಈ ತರಬೇತಿಗೆ ಜೆಸಿ ಯವರಿಗೆ 5000 ರೂಪಾಯಿಗಳಷ್ಟು ಶುಲ್ಕವಿದೆ ಹಾಗು ಜೂನ್ ೨೫ ನೋಂದಾವಣೆಯ ಕೊನೆಯ ದಿನಾಂಕವಾಗಿದೆ .

3 ದಿನಗಳ ಈ ಕಾರ್ಯಾಗಾರದಲ್ಲಿ ಊಟ ತಿಂಡಿ ಹಾಗು ವಸತಿಯ ಸೌಲಭ್ಯವಿದೆ,, ಜೆಸಿ ಸಂಸ್ಥೆಗೆ ತರಬೇತಿಯೇ ಜೀವಾಳವಾಗಿದ್ದು ನಾಯಕ ತರಬೇತಿ ಜೇಸಿಐನ ಅತ್ಯುತ್ತಮ ತರಬೇತಿಯಲ್ಲಿ ಒಂದು ಹಾಗಾಗಿ ಈ ತರಬೇತಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಜೆಸಿ ಯವರು ಬಂದು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಮುಖ್ಯ ತರಬೇತುದಾರರಾದ ಜೆಸಿ ಸೆನೆಟರ್ ಸದಾನಂದ ನಾವಡ ರವರು ಉಡುಪಿ ಟೈಮ್ಸ್ ಗೆ ತಿಳಿಸಿದರು . ಜೆಸಿ ಜಗದೀಶ್ ಶೆಟ್ಟಿ ಅಧ್ಯಕ್ಷತೆಯ ಜೆಸಿ ಉಡುಪಿ ಸಿಟಿ ಘಟಕವು ಈ ತರಬೇತಿಯ ಆತಿಥ್ಯ ವಹಿಸಲಿದೆ.

Leave a Reply

Your email address will not be published. Required fields are marked *

error: Content is protected !!