ಮಣಿಪಾಲ ಪೊಲೀಸರ ಕ್ಷೀಪ್ರ ಕಾರ್ಯಚರಣೆ ಐವರು ದರೋಡೆಕೋರರ ಬಂಧ

ಮಣಿಪಾಲ: ಕೆಲಸ  ಮುಗಿಸಿ ರಾತ್ರಿ ಮನೆಗೆ ತೆರಳುತ್ತಿದ್ದ ಯುವಕನಹಲ್ಲೆ ಮಾಡಿ ಚಿನ್ನದ ಸರ, ನಗದು ದೋಚಿದ ಪ್ರಕರಣ ಸಹಿತ ಮೂರು ಪ್ರಕರಣಗಳಲ್ಲಿ ಭಾಗಿಯಾದ ಐವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.   ಪೆರಂಪಳ್ಳಿ ನಿವಾಸಿ ನರಸಿಂಹ ನಾಯ್ಕ್   ಬೈಕ್‌ನಲ್ಲಿ ತೆರಳುತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಎರಡು ಬೈಕ್‌ನಲ್ಲಿ ಬಂದ ನಾಲ್ಕು ಜನ ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ, ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ನರಸಿಂಹ ನಾಯ್ಕ್ ಬಳಿ ಇದ್ದ ಚಿನ್ನದ ಸರ ಕದ್ದು ಜೀವ ಬೆದರಿಕೆಯೊಡ್ಡಿ ಪರಾರಿಯಾಗಿದ್ದರು. ಘಟನೆಯಲ್ಲಿ ಯುವಕನ ಎಡಗಣ್ಣಿಗೆ ಗಂಬೀರ ಗಾಯವಾಗಿದ್ದು, ಆತನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಮಣಿಪಾಲ ಪೊಲೀಸರ ಕ್ಷೀಪ್ರ ಕಾರ್ಯಚರಣೆಯಲ್ಲಿ ಐವರನ್ನು ಬಂಧಿಸಲಾಗಿದೆ. ಆರೋಪಿಗಳ ವಿವರ ಇನ್ನಷ್ಟೆ ಬಹಿರಂಗವಾಗಬೇಕಿದೆ.

Leave a Reply

Your email address will not be published. Required fields are marked *

error: Content is protected !!