ನಿಟ್ಟೆ ಪಂಚಾಯತ್‌ನಲ್ಲಿ ಕೋಟ್ಯಾಂತರ ರೂಪಾಯಿ ಹಗರಣ: ಬೆಳ್ಳಿಪಾಡಿ ನೇಮಿರಾಜ ರೈ

ಉಡುಪಿ : ನಿಟ್ಟೆ ಪಂಚಾಯತ್‌ನಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ನಿಟ್ಟೆ ಬೆಳ್ಳಿಪಾಡಿ ನೇಮಿರಾಜ ರೈ ಆರೋಪಿಸಿದ್ದಾರೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಇವರು, ನಿಟ್ಟೆ ಪಂಚಾಯತ್‌ನಲ್ಲಿ ಲೆಕ್ಕ ಪರಿಶೋಧನಾ ಇಲಾಖೆಯವರು ತನಿಖೆ ನಡೆಸಿರೋ ವರದಿ ಪ್ರಕಾರ ನಿಟ್ಟೆ ಪಂಚಾಯತ್‌ನಲ್ಲಿ 2.5 ಕೋಟಿಯಷ್ಟು ಹಗರಣ ನಡೆದಿದೆ.

ಈ ತನಿಖೆಯ ವರದಿ ಸಲ್ಲಿಸಿ 1.5 ವರ್ಷಗಳು ಕಳೆದರೂ ಇದುವರೆಗೆ ಯಾರೂ ಕೂಡಾ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಇದು ಮೇಲ್ನೋಟಕ್ಕೆ ಪಂಚಾಯತ್‌ಗೆ ಸಂಬಂಧಿಸಿದ ವಿಚಾರವಾಗಿ ಕಂಡು ಬಂದರೂ ಕೂಡಾ, ಇದು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಸರಕಾರ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದ್ದಾಗಿದೆ, ಆದರೆ ಈ ಬಗ್ಗೆ ಯಾವುದೇ ಇಲಾಖೆ ಒಂದೇ ಒಂದು ಪ್ರಶ್ನೆ ಮಾಡಿಲ್ಲ ಎನ್ನುವುದು ಬೇಸರದ ಸಂಗತಿ. ಈ ಬಗ್ಗೆ ಸಾರ್ವಜನಿಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ.

ಇನ್ನು ಈ ಅವ್ಯವಹಾರದಲ್ಲಿ ಭಾಗಿಯಾಗಿರುವವರೇ ಈ ಭಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪಧಿಸುತ್ತಿದ್ದಾರೆ ಅವರ ಮೇಲೂ ಯಾವುದೇ ಕ್ರಮ ಜರುಗಿಸಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾದ ಪಿಡಿಓಗಳನ್ನು ಇವರೇ ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ ಆರೋಪಿಸಿದರು.

 ಇಂದೊಂದು ಗಂಭೀರವಾದ ವಿಚಾರವಾಗಿದ್ದು,  ನೂರಾರು ಕೋಟಿ ಹಣ ಲೂಟಿ ಮಾಡಲು ವ್ಯವಸ್ಥಿತವಾದ ಸಂಚು ನಡೆಯುತ್ತಿದೆ ಎಂದ ಅವರು, ನಮ್ಮಲ್ಲಿರುವ ಅನೇಕ ತನಿಖಾ ಸಂಸ್ಥೆಗಳು ಅನೇಕ ಭಾರಿ ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ಕೈಗೆತ್ತಿಕೊಂಡು ತನಿಖೆ ನಡೆಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತದೆ. ಹೀಗಿರುವಾಗ ನಿಟ್ಟೆ ಪಂಚಾಯತ್‌ನ ಹಗರಣದ ಕುರಿತ ಈ ಪ್ರಕರಣವನ್ನು ಯಾಕೆ ತನಿಖಾ ಸಂಸ್ಥೆಗಳು ಕೈಗೆತ್ತಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯರನ್ನು ಖರೀದಿ ಮಾಡುತ್ತಿದ್ದಾರೆ ಎಂಬ ವಿಚಾರವನ್ನು  ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಅದೇ ರೀತಿ ಈ ವಿಚಾರದ ಮೂಲದ ಬಗೆ ಸರಕಾರ ಯಾಕೆ ತನಿಖೆ ನಡೆಸಲು ಮುಂದಾಗುತ್ತಿಲ್ಲ. ಚುನಾವಣೆಯಲ್ಲಿ ಆಗುವಂತಹ ಅವ್ಯವಹಾರಗಳ ಕ್ರಮ ಕೈಗೊಳ್ಳಲು ಆದೇಶ ನೀಡುವ ಕೋರ್ಟ್ಗಳು ಈ ವಿಚಾರದ ಕುರಿತು ಯಾಕೆ ಸುಮ್ಮನಿದೆ ಎಂದ ಅವರು ಪಂಚಯಾತ್‌ನ  ಕಾಯ್ದೆಗಳಿಗೆ ಮನ್ನಣೆ ಇಲ್ಲ ಅಂದ ಮೇಲೆ ಚುನಾವಣೆ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!