ನಾಯಕತ್ವದ ಅರಿವು ಮೂಡಿಸಲು ಶಾಲಾ ಸಂಸತ್ತು :ದಿನೇಶ್ ಅಮ್ಟೂರು

ಬಂಟ್ವಾಳ: ಕಲ್ಲಡ್ಕ  ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  2019-20 ನೇ ಸಾಲಿನ ಶಾಲಾ ಸಂಸತ್ತು ಅಧಿವೇಶನ ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್‍ಯಕ್ರಮವು  ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಅಗ್ನಿ ಹೋತ್ರ ಹಾಗೂ ಸರಸ್ವತಿ ವಂದನೆ ಮೂಲಕ ಆರಂಭಿಸಲಾಯಿತು.

ಅತಿಥಿಯಾಗಿದ್ದ ತಾಲೂಕು ಪಂಚಾಯತ್‌ನ ಮಾಜಿ ಉಪಾಧ್ಯಕ್ಷರಾದ ದಿನೇಶ್ ಅಮ್ಟೂರು ಮಾತನಾಡಿ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತಿನ ಪಾತ್ರ ಬಹುಮುಖ್ಯ. ಸಂವಿಧಾನವೆಂಬುದು ದೇಶದ ಧರ್ಮಗ್ರಂಥ. ನಾಯಕತ್ವದ ಅರಿವು ಮೂಡಿಸಲು ಈ ಶಾಲಾ ಸಂಸತ್ತು ರಚನೆಯಾಗುತ್ತದೆ. ಶಾಲೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವವನ್ನು ಬೆಳೆಸುವ ಕೊಂಡಿಯಾಗಿದೆ ಎಂದರು.  ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿ ರಾಜೇಶ್ವರಿ ಪ್ರಮಾಣವಚನವನ್ನು ಬೋಧಿಸಿದರು. ನಂತರ ವಿವಿಧ ಸಂಘಗಳ ಉದ್ಘಾಟನೆಯನ್ನು ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಠ್ಠಲ್ ನಾಯ್ಕ್ ನೆರವೇರಿಸಿದರು.

ಶಾಲಾ ನಾಯಕನಾಗಿ 7ನೇ ತರಗತಿಯ ದೀಕ್ಷಿತ್, ಗೃಹಮಂತ್ರಿಯಾಗಿ ಶ್ರಮಿಕಾ, ಕೃಷಿ ಸಚಿವರಾಗಿ ಶ್ರೀಜನ್ಯ ಹಾಗೂ ಹೇಮಂತ್, ನೀರಾವರಿ ಸಚಿವರಾಗಿ ಭುವನ್, ಸಾಂಸ್ಕೃತಿಕ ಮಂತ್ರಿಯಾಗಿ ಮನಸ್ವಿ ಹಾಗೂ ನಿಖಿತಾ, ಕ್ರೀಡಾಮಂತ್ರಿಯಾಗಿ ರೋಹಿತ್, ಆರೋಗ್ಯಮಂತ್ರಿಯಾಗಿ ತ್ರಿಶಾ ಅತಿಕಾರಿ, ಸ್ವಚ್ಛತಾ ಮಂತ್ರಿಯಾಗಿ ಜೀವಿತ್ ಮತ್ತು ಧನುಷ್, ಶಿಕ್ಷಣ ಮಂತ್ರಿಯಾಗಿ ಶ್ರೀನಿವಾಸ ಮತ್ತು ಅನನ್ಯ, ವಾರ್ತಾಸಚಿವರಾಗಿ ತಿಲಕ್ ಮತ್ತು ಅನುಷಾ, ಸಭಾಪತಿಯಾಗಿ ಕುಶಿ ಪೂಜಾರಿ, ವಿರೋಧ ಪಕ್ಷದ ನಾಯಕನಾಗಿ ಕೆ.ಧನುಷ್ ಕೆ ಜಿ ಮಾಸ್ಟರ್ ಇವರು ಪ್ರಮಾಣವಚನ ಸ್ವೀಕರಿಸಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮೀಗೋಪಾಲಾಚಾರ್, ಕುಲ್ಯಾರು ನಾರಾಯಣ ಶೆಟ್ಟಿ,   ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಮತಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಸುಧನ್ವ ಶಾಸ್ತ್ರೀ ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತಿಯಿದ್ದರು.
ಶಾಲಾ ಅಧ್ಯಾಪಕರಾದ ಸುಮಂತ್ ಆಳ್ವ ನಿರೂಪಿಸಿ, ವೇದಾವತಿ ಸ್ವಾಗತಿಸಿ ರೇಷ್ಮಾ ವಂದಿಸಿದರು

Leave a Reply

Your email address will not be published. Required fields are marked *

error: Content is protected !!